T20 wc 2022 | ಟಿ 20 ವರ್ಲ್ಡ್ ಕಪ್ 2022 ಬಗ್ಗೆ ಪ್ರಮುಖ ಪ್ರಕಟನೆ
ಈ ವರ್ಷ ಅಕ್ಟೋಬರ್–ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ ಮಾಡಲಾಗಿದೆ.
ಮೆಗಾ ಟೂರ್ನಿಯಲ್ಲಿ ಭಾಗಿಯಾಗಲಿರುವ ತಂಡಗಳು ತನ್ನ ಸಂಪೂರ್ಣ ವಿವರಗಳನ್ನು ಸೆಪ್ಟಂಬರ್ 15 ರ ಒಳಗೆ ಪ್ರಕಟಿಸಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಲಿ ಡೆಡ್ ಲೈನ್ ನೀಡಿದೆ.
ವಿಶ್ವಕಪ್ ತಂಡದಲ್ಲಿರುವ 15 ಮಂದಿ ಸದಸ್ಯರ ವಿವರಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸುವಂತೆ ಸಂಬಂಧಿತ ಕ್ರಿಕೆಟ್ ಮಂಡಳಿಗಳಿಗೆ ಐಸಿಸಿ ಸೂಚಿಸಿದೆ.
T20 ವಿಶ್ವಕಪ್ 2022 ಅಕ್ಟೋಬರ್ 16 ರಂದು ಕ್ವಾಲಿಫೈಯರ್ ನೊಂದಿಗೆ ಪ್ರಾರಂಭವಾಗಲಿದೆ.

ಗುಂಪು ಹಂತದಲ್ಲಿ ನಮೀಬಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ಯುಎಇ ತಂಡಗಳು ಎರಡು ಗುಂಪುಗಳಾಗಿ ವಿಭಜಿಸಿ ಪರಸ್ಪರ ಪೈಪೋಟಿ ನಡೆಸುತ್ತವೆ.
ಎರಡು ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೂಪರ್ 12 ಸುತ್ತಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿವೆ.
ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೂಪರ್ 12 ಸುತ್ತಿನ ಗುಂಪು 1 ರಲ್ಲಿ ಸ್ಪರ್ಧಿಸುತ್ತವೆ.
ಗುಂಪು 2 ರಲ್ಲಿ, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಸ್ಪರ್ಧಿಸಲಿವೆ.
ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಅಕ್ಟೋಬರ್ 23 ರಂದು ಪಾಕ್ ವಿರುದ್ಧ ಸೆಣಸಲಿದೆ. t20-wc-2022-squad-submission-deadline








