ಬೆಳಗಾವಿ : ಕೊರೊನಾ ವಾರಿಯರ್ಸ್ ಆಗಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಶಾ ಕಾರ್ಯಕರ್ತರಿಗೆ ತಲಾ ಮೂರು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನದ ಚೆಕ್ನ್ನು ಡಿಸಿಎಂ ಲಕ್ಷ್ಮಣ ಸವದಿ ವಿತರಿಸಿದರು.
ಸರ್ಕಾರ ಕೊಡುವ ನಾಲ್ಕು ಸಾವಿರ ಗೌರವ ಧನದಲ್ಲಿಯೆ ಬದುಕು ಸಾಗಿಸುವ ಆಶಾ ಕಾರ್ಯಕರ್ತರು ತಮ್ಮ ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ. ಮಳೆ, ಗಾಳಿ, ಬಿಸಿಲು ಎನ್ನದೆ ಸಾರ್ವಜನಿಕರ ಹಿತಕ್ಕಾಗಿ ಕೊವಿಡ್ 19 ತುರ್ತು ಸಂಧರ್ಭದಲ್ಲಿ ಕೆಲಸ ನಿರ್ವಹಿಸಿದ್ದು ಶ್ಲಾಘನೀಯ ಆದ್ದರಿಂದ ಕೊರೊನಾ ವಾರಿಯರ್ಸಗೆ ಸಹಕಾರಿಗಳ ಸಲಾಂ ತತ್ವದ ಅಡಿಯಲ್ಲಿ ಇಂದು ಐನಾಪುರ, ಕೃಷ್ಣಾ ಕಿತ್ತೂರ, ಮದಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕರ್ತವ್ಯ ನೀರ್ವಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.
ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೋವಿಡ್-19 ಬಂದ ಮೆಲೆ ಭಾರತದ ನಾಗರಿಕರನ್ನು ಸುರಕ್ಷಿತವಾಗಿಡಲು ಆಶಾ ಕಾರ್ಯಕರ್ತೆಯರು ಮಾಡಿದ್ದಾರೆ. ಅಲ್ಲದೆ ಜೀವ ಹಾನಿ ತಪ್ಪಿಸಲು ವೈದ್ಯರ ಜೊತೆಗೂಡಿ ಆಶಾ ಕಾರ್ಯಕರ್ತರು ಕೆಲಸ ಮಾಡಿದ್ದನ್ನು ಗುರುತಿಸಿ ಅಭಿನಂದಿಸುವ ಕೆಲಸಕ್ಕೆ ಸರ್ಕಾರ ಚಾಲನೆ ನೀಡಿದೆ. ಜೀವದ ಹಂಗು ತೊರೆದು ಕುಟುಂಬದ ತೊಂದರೆಗಳನ್ನು ಮೆಟ್ಟಿನಿಂತು ಸಮಾಜಸೇವೆ ಮಾಡಿದ್ದು ಆಶಾ ಕಾರ್ಯಕರ್ತರ ಸಹಕಾರ ದೊಡ್ಡದು.
ಈ ನಿಟ್ಟಿನಲ್ಲಿ ಇಷ್ಟು ವರ್ಷ ಕಡೆಗಣನೆಗೆ ಒಳಗಾಗಿದ್ದ ಆಶಾ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ ಕೆಲಸ ವನ್ನು ಮಾಡಿದ ಸಹಕಾರಿ ಸಂಘಗಳ ಸಹಕಾರವನ್ನು ಸರ್ಕಾರ ಅಭಿನಂದಿಸುತ್ತದೆ. ಆಶಾ ಕಾರ್ಯಕರ್ತರ ಕೆಲಸ ಉತ್ತಮ ಸಮಾಜಕ್ಕೆ ನಾಂದಿ ಹಾಡಿದೆ. ಸುಂದರ ಮತ್ತು ಸ್ವಸ್ಥ ಸಮಾಜಕ್ಕಾಗಿ ನಿಮ್ಮಿಂದ ಇನ್ನಷ್ಟು ಸೇವೆ ಸಿಗುವಂತಾಗಲಿ ಎಂದು ಆಶಾ ಕಾರ್ಯಕರ್ತರನ್ನು ಅಭಿನಂದಿಸಿದರು
ಈ ಸಂದರ್ಭದಲ್ಲಿ ಅಥಣಿ ಕೊ ಆಪರೆಟಿವ್ ಡೆವಲಪ್ಮೆಂಟ್ ಆಫೀಸರ್ ವಿನಾಯಕ ಲಕ್ಸಾಣಿ, ರವಿ ಪೂಜಾರಿ, ಪ್ರಕಾಶ ಕೊರಬು, ಉಮೇಶರಾವ ಬಂಟೋಡ್ಕರ್, ಕಿತ್ತೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.








