ADVERTISEMENT
Tuesday, September 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

444 ಕಿ.ಮೀ ವಿಸ್ತೀರ್ಣ, 1.5 ಲಕ್ಷ ಜನಸಂಖ್ಯೆ.. ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆದ ಪುಟ್ಟ ದೇಶದ ರೋಚಕ ಫುಟ್‍ಬಾಲ್ ಸಾಧನೆಯ ಸ್ಟೋರಿ..!

admin by admin
June 17, 2026
in Uncategorized
Curaçao's Football team

Curaçao's Football team

Share on FacebookShare on TwitterShare on WhatsappShare on Telegram

ಕ್ಯುರಾಸಾವೋ..
ಬಹುತೇಕರಿಗೆ ಈ ಹೆಸರಿನ ಒಂದು ರಾಷ್ಟ್ರವಿದೆ ಅಂತ ಗೊತ್ತಿರಲಿಕ್ಕಿಲ್ಲ. ಆದ್ರೆ ಈ ದೇಶ ಈಗ 2026ರ ಫಿಫಾ ವಿಶ್ವಕಪ್ ಟೂರ್ನಿಯಿಂದ ಚಾಲ್ತಿಗೆ ಬಂದಿದೆ.

ಹೌದು. ಕ್ಯುರಾಸಾವೋ ದೇಶ ವಿಸ್ತೀರ್ಣದಲ್ಲಿ ನಮ್ಮ ಬೆಂಗಳೂರಿಗಿಂತಲೂ ಚಿಕ್ಕದಾಗಿದೆ. ಕೇವಲ 444 ಚದರ ಕಿಲೋಮೀಟರ್ ಹೊಂದಿರುವ ಈ ದೇಶದ ಜನಸಂಖ್ಯೆ ಬರೀ 1.6ಲಕ್ಷ. ಭಾರತ ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆಯಲು ಇನ್ನೂ ಒದ್ದಾಡುತ್ತಿದ್ರೆ, ಇಷ್ಟೊಂದು ಕಡಿಮೆ ಜನಸಂಖ್ಯೆಯ ದೇಶವೊಂದು ಆಧುನಿಕ ತಂತ್ರಜ್ಞಾನ ಮತ್ತು ವೃತ್ತಿಪರ ಆಟಗಾರರನ್ನು ಬಳಸಿಕೊಂಡು ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆದುಕೊಂಡಿರುವುದು ಅದ್ಭುತ ಸಾಧನೆಯೇ ಸರಿ.

Related posts

kiccha-sudeep-gives-stern-warning-to-modern-manju-and-agni-boys-in-bigg-boss-kannada-promo

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್

September 21, 2026
preetham-gubbi-directs-my-baby-starring-sumukha-and-eesha

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

September 21, 2026

ಅಂದ ಹಾಗೇ ಕ್ಯುರಾಸಾವೋ ದಕ್ಷಿಣ ಕೆರೆÀಬಿಯನ್ ಸಮುದ್ರದ ಒಂದು ಸುಂದರವಾದ ದ್ವೀಪರಾಷ್ಟ್ರ. ಉತ್ತರ ಅಮೆರಿಕಾ ಖಂಡದ ಕೆರಬಿಯನ್ ವಲಯಕ್ಕೆ ಸೇರಿದ್ರೂ ಇದು ದಕ್ಷಿಣ ಅಮೆರಿಕಾದ ಖಂಡದ ವೆನೆಜುವೆಲಾ ಕರಾವಳಿಗೆ ಅತ್ಯಂತ ಹತ್ತಿರದಲ್ಲಿದೆ. 36ಕ್ಕೂ ಹೆಚ್ಚು ಅದ್ಭುತವಾದ ಕಡಲ ತೀರಗಳನ್ನು ಹೊಂದಿರುವ ಈ ದ್ವೀಪರಾಷ್ಟ್ರ ಸ್ಕೂಬಾ ಡೈವಿಗ್‍ನ ಸ್ವರ್ಗವಾಗಿದೆ. ಆದ್ರೆ ರಾಜತಾಂತ್ರಿಕವಾಗಿ ಇದು ನೆದರ್ಲೆಂಡ್ ಸಾಮ್ರಾಜ್ಯದ ಅಧೀನದಲ್ಲಿರುವ ಸ್ವಾಯತ್ತ ದೇಶವಾಗಿದೆ.

ಪ್ರವಾಸೋದ್ಯಮವೇ ಈ ರಾಷ್ಟ್ರದ ಬೆನ್ನುಲುಬು. ಆದ್ರೆ ಇಲ್ಲಿನ ಜನರಿಗೆ ಫುಟ್‍ಬಾಲ್ ಆಟ ಅಂದ್ರೆ ಅದು ಬರೀ ಒಂದು ಆಟವಲ್ಲ. ಅದೊಂದು ಭಾವನೆ. ಇಷ್ಟಪಟ್ಟು, ಕಷ್ಟಪಟ್ಟು ಒಲಿಸಿಕೊಂಡ ಪ್ರೀತಿಯ ಹಾಗೇ. ಹಾಗಾಗಿಯೇ ಕ್ಯುರಾಸಾವೊದಲ್ಲಿ ಫುಟ್‍ಬಾಲ್ ಅಪಾರ ಜನಪ್ರಿಯತೆ ಪಡೆದುಕೊಳ್ಳಲು ಸಾಧ್ಯವಾಯ್ತು.

ಅಂದ ಹಾಗೇ, ಕ್ಯುರಾಸಾವೊ ಜನರಿಗೆ ಫುಟ್‍ಬಾಲ್ ಆಟವನ್ನು ಪ್ರೀತಿಸಿ, ಆರಾಧಿಸುವುದನ್ನು ಹೇಳಿಕೊಟ್ಟವರು ಡಚ್ಚರು. ಅಂದ್ರೆ ನೆದರ್ಲೆಂಡ್‍ನವರು. ಹಾಗೇ ನೋಡಿದ್ರೆ ಫುಟ್‍ಬಾಲ್‍ಗೂ ಕ್ಯುರಾಸಾವೊಗೆ ನೂರಾರು ವರ್ಷಗಳ ಇತಿಹಾಸವಿದೆ. 20ನೇ ಶತಮಾನದ ಆರಂಭದಲ್ಲಿ ಡಚ್ಚರ ಪ್ರಭಾವದಿಂದ ಈ ದ್ವೀಪದ ಜನರು ಕಾಲ್ಚೆಂಡಿನ ಆಟದ ಮೋಹದ ಬಲೆಯೊಳಗೆ ಸಿಲುಕಿದ್ರು. 1921ರಲ್ಲಿ ಫೆಡರೇಶನ್ ಫುಟ್‍ಬಾಲ್ ಕೊರ್ಸ್ ಸ್ಥಾಪನೆಯಾದ್ರೂ ನೆದರ್ಲೆಂಡ್ ಆಂಟಿಲೀಸ್ ಫುಟ್‍ಬಾಲ್ ತಂಡದ ಭಾಗವಾಗಿತ್ತು. ಆದ್ರೂ ಅಂದಿನ ದಿನಗಳಲ್ಲಿ ಕೆರೆಬಿಯನ್ ವಲಯದಲ್ಲಿ ಕ್ಯುರಾಸಾವೊ ಬಲಿಷ್ಠ ತಂಡವಾಗಿ ಹೊರಹೊಮ್ಮಿತ್ತು.

ಆದ್ರೆ 2010ರಲ್ಲಿ ನೆದರ್ಲೆಂಡ್ ಆಂಟಿಲೀಸ್ ವಿಭಜನೆಯಾದಾಗ ಕ್ಯುರಾಸಾವೊ ಪ್ರತ್ಯೇಕ ದೇಶವಾಗಿ ಫಿಫಾ ಸದಸ್ಯತ್ವವನ್ನು ಪಡೆದುಕೊಂಡಿತ್ತು. ಅಲ್ಲಿಂದ ಕ್ಯುರಾಸಾವೊ ದೇಶದ ಫುಟ್‍ಬಾಲ್ ತಂಡದ ಹೆಸರಿನಲ್ಲಿ ಹೊಸ ಯುಗ ಶುರುವಾಯ್ತು. ಆದ್ರೆ ಆರಂಭಿಕ ದಿನಗಳಲ್ಲಿ ವಿಶ್ವ ಫುಟ್‍ಬಾಲ್ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಾಕಷ್ಟು ಶ್ರಮಪಡಬೇಕಾಯ್ತು ಎಂಬುದು ಬೇರೆ ವಿಚಾರ.

ಅಷ್ಟಕ್ಕೂ ಕ್ಯುರಾಸಾವೊ ದೇಶದ ಫುಟ್‍ಬಾಲ್ ಪ್ರೀತಿಗೂ ನೆದರ್ಲೆಂಡ್‍ಗೂ ಜನುಮ ಜನುಮದ ಸಂಬಂಧವಿದೆ. ಅನುಬಂಧವಿದೆ. ಕ್ಯುರಾಸಾವೊ ದೇಶ ಸಣ್ಣ ರಾಷ್ಟ್ರವಾಗಿದ್ದರಿಂದ ಅಲ್ಲಿನ ನೂರಾರು ಫುಟ್‍ಬಾಲ್ ಪ್ರತಿಭೆಗಳು ನೆದರ್ಲೆಂಡ್‍ನ ವಿವಿಧ ಕ್ಲಬ್‍ಗಳಲ್ಲಿ ತರಬೇತಿ ಪಡೆಯುತ್ತಾರೆ. ಅಲ್ಲದೆ ಅಲ್ಲಿನ ಯುರೋಪಿನ್ ಲೀಗ್‍ಗಳಲ್ಲಿ ಆಡುತ್ತಿದ್ದಾರೆ. ಇನ್ನು ಕೆಲವರು ಬದುಕು ಕಟ್ಟಿಕೊಳ್ಳಲು ನೆದರ್ಲೆಂಡ್‍ಗೆ ವಲಸೆ ಹೋಗುತ್ತಾರೆ. ಸದ್ಯ ತಂಡದಲ್ಲಿರುವ ಶೇಖಡಾ 80ರಷ್ಟು ಹೆಚ್ಚು ಕ್ಯುರಾಸಾವೊದ ಆಟಗಾರರು ನೆದರ್ಲೆಂಡ್‍ನಲ್ಲಿ ಹುಟ್ಟಿ ಬೆಳೆದವರು. ಹೀಗಾಗಿ ಇವರು ನೆದರ್ಲೆಂಡ್ ಮತ್ತು ಕ್ಯುರಾಸಾವೊ ಎರಡು ದೇಶಗಳ ಪೌರತ್ವವನ್ನು ಹೊಂದಿದ್ದಾರೆ. ನೆದರ್ಲೆಂಡ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲರಾದ ಕ್ಯುರಾಸಾವೊ ಆಟಗಾರರು ತಮ್ಮ ತಾಯ್ನಾಡಿನ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿಯೇ ಇವತ್ತು ಕ್ಯುರಾಸಾವೊ ತಂಡ ಫಿಫಾ ವಿಶ್ವಕಪ್‍ನಲ್ಲಿ ಅರ್ಹತೆ ಪಡೆಯಲು ಸಫಲವಾಯ್ತು.
ಯುರೋಪಿಯನ್ ಫುಟ್‍ಬಾಲ್ ಶೈಲಿಯ ಆಟಕ್ಕೆ ಒಗ್ಗಿಕೊಂಡಿರುವ ಕ್ಯುರಾಸಾವೊ ಆಟಗಾರರಿಗೆ 2015 ಸ್ಪೂರ್ತಿಯ ಚಿಲುಮೆಯಾಗಿದ್ದು ನೆದರ್ಲೆಂಡ್‍ನ ಖ್ಯಾತ ಆಟಗಾರ ಹಾಗೂ ಕೋಚ್ ಪ್ಯಾಟ್ರಿಕ್ ಕ್ಲುಯಿವೆರ್ಟ್. ಪ್ರಸ್ತುತ ನೆದರ್ಲೆಂಡ್‍ನ ಪ್ರಸಿದ್ಧ ಆಟಗಾರ ಹಾಗೂ ಕೋಚ್ ಡಿಕ್ ಅಡ್ವೊಕಾಟ್ ಮಾರ್ಗದರ್ಶನದಲ್ಲಿ 2026ರ ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆದುಕೊಂಡಿದೆ.

ಇನ್ನು, ಆಕ್ರಮಣಕಾರಿ ಮತ್ತು ವೇಗದ ಆಟಕ್ಕೆ ಈ ತಂಡವನ್ನು ಬ್ಲ್ಯಾಕ್ ಪ್ಯಾಂಥರ್ಸ್ ಅಂತ ಕರೆಯಲಾಗುತ್ತಿದೆÉ. ಹಾಗೆ ಕೆರೆಬಿಯನ್ ಸಮುದ್ರದ ನೀಲಿ ಅಲೆಗಳ ಸಂಕೇತವಾಗಿ ಈ ದೇಶದ ಆಟಗಾರರು ಕಡು ನೀಲಿ ಬಣ್ಣದ ಜೆರ್ಸಿ ಧರಿಸುತ್ತಾರೆ. ಹಾಗಾಗಿ ಇವರನ್ನು ದಿ ಬ್ಲೂ ವೇವ್ ಅಂತನೂ ಬಣ್ಣಿಸಲಾಗುತ್ತಿದೆ.

ಹಾಗೇ ನೋಡಿದ್ರೆ ಪುಟ್ಟ ದ್ವೀಪರಾಷ್ಟ್ರವಾದ್ರೂ ಕ್ಯುರಾಸಾವೊ ಫುಟ್‍ಬಾಲ್ ಆಟಕ್ಕೆ ಎಲ್ಲಿಲ್ಲದ ಆದ್ಯತೆ ನೀಡುತ್ತಿದೆ. 10 ಸ್ಥಳೀಯ ಕ್ಲಬ್‍ಗಳ ನಡುವೆ ದೇಶಿ ಲೀಗ್ ಟೂರ್ನಿಯನ್ನು ಆಯೋಜನೆ ಮಾಡುತ್ತಿದೆ. ಅಲ್ಲದೆ ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ ಹೆಚ್ಚಿನ ತರಬೇತಿಗಾಗಿ ನೆದರ್ಲೆಂಡ್‍ನ ಫುಟ್‍ಬಾಲ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಹೀಗಾಗಿಯೇ ಸಣ್ಣ ರಾಷ್ಟ್ರವಾದ್ರೂ ಅಪ್ರತಿಮ ಆಟಗಾರರ ಪ್ರತಿಭೆಯನ್ನು ಬೆಳಗಿಸಲು ಪ್ರೋತ್ಸಾಹ ನೀಡುತ್ತಿದೆ. ಆದ್ರೆ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಫುಟ್‍ಬಾಲ್ ಆಟ ನಶಿಸಿಹೋಗುತ್ತಿದೆ. ಕೇವಲ ಪ್ರತಿಷ್ಠೆ, ಅಧಿಕಾರ ದಾಹದಿಂದ ಫುಟ್‍ಬಾಲ್ ಫೆಡರೇಷನ್ ತಳಮಟ್ಟದ ಪ್ರತಿಭೆಗಳನ್ನು ಗುರುತಿಸಲು ವಿಫಲವಾಗುತ್ತಿದೆ. ಕ್ಯುರಾಸಾವೊ, ಕೇಪ್‍ವರ್ಡೆ ಮೊದಲಾದ ಸಣ್ಣಪುಟ್ಟ ದೇಶಗಳು ಫುಟ್‍ಬಾಲ್‍ಗೆ ನೀಡುತ್ತಿರುವ ಪ್ರೋತ್ಸಾಹ, ಮನ್ನಣೆಯನ್ನು ಭಾರತದ ಫುಟ್‍ಬಾಲ್ ಕ್ಲಬ್‍ಗಳು ನೋಡಿಕಲಿಯಬೇಕಿದೆ.

2026ರ ಫಿಫಾ ವಿಶ್ವಕಪ್‍ನ ಅರ್ಹತಾ ಪಂದ್ಯಗಳಲ್ಲಿ ಕ್ಯುರಾಸಾವೊ ತಂಡ ಬಲಿಷ್ಠ ಜಮೈಕಾ, ಹೊಂಡುರಾಸ್, ಪನಾಮದಂತ ತಂಡಗಳನ್ನು ಸೋಲಿಸಿದೆ. ರಕ್ಷಣಾತ್ಮಕ ಆಟ ಮತ್ತು ವೇಗದ ಕೌಂಟರ್ ಅಟ್ಯಾಕ್ ಕ್ಯುರಾಸಾವೊ ತಂಡದ ಆಟದ ಶೈಲಿ. ಇಂಗ್ಲೀಷ್ ಪ್ರೀಮಿಯರ್ ಲೀಗ್‍ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಲುಟಾನ್ ಟೌನ್ ಕ್ಲಬ್ ಪರ ಆಡಿರುವ ತಾಹಿತ್ ಚಾಂಗ್, ನಾಯಕ ಲಿಯಾಂಡ್ರೊ ಮತ್ತು ಜುನಿನ್ಹೊ ಸಹೋದರರು ತಂಡದ ಪ್ರಮುಖ ಆಟಗಾರರು. ಜುನಿನ್ಹೊ ಬಕುನಾ ಬರ್ಮಿಂಗ್ ಹ್ಯಾಮ್ ಸಿಟಿ ಕ್ಲಬ್‍ನ ಮಿಡ್‍ಫೀಲ್ಡರ್. ಇನ್ನೊಂದೆಡೆ ಜರ್ಮನಿ ವಿರುದ್ದ ಗೋಲು ದಾಖಲಿಸಿರುವ ಲಿವಾನೊ ಕೊಮೆನೆನ್ಸಿಯಾ ಇಟಲಿಯ ಜುವೆಂಟರ್ಸ್ ಕ್ಲಬ್ ಪರ ಆಡುತ್ತಿದ್ದಾರೆ. ಹಾಗೆ ಎಲೋಯ್ ರೂಮ್ ತಂಡದ ಹಿರಿಯ ಹಾಗೂ ನಂಬಿಕಸ್ಥ ಗೋಲುಕೀಪರ್ ಆಗಿದ್ದಾರೆ. ಅಲ್ಲದೆ ತಂಡದ ಬಹುತೇಕ ಆಟಗಾರರು ಯೂರೋಪಿಯನ್ ಲೀಗ್‍ನಲ್ಲಿ ಆಡುತ್ತಿರುವುದರಿಂದ ಒಂದೇ ವೇಗದಲ್ಲಿ ಆಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಕೆರೆಬಿಯನ್ ದೈಹಿಕ ಶಕ್ತಿ ಮತ್ತು ಡಚ್ ತಾಂತ್ರಿಕತೆಯ ಯುಕ್ತಿಯಿಂದ ಕ್ಯುರಾಸಾವೊ ತಂಡ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.

ಅದೇನೇ ಇರಲಿ, ಪ್ರಸ್ತುತ ಫಿಫಾ ವಿಶ್ವಕಪ್‍ನಲ್ಲಿ ಬಲಿಷ್ಠ ಜರ್ಮನಿ ವಿರುದ್ಧ ಮೊದಲ ಪಂದ್ಯದಲ್ಲಿ ಕ್ಯುರಾಸಾವೊ ತಂಡ 7-1ಗೋಲುಗಳಿಂದ ಸೋತಿರಬಹುದು. ಆದ್ರೆ ಮಿಡ್‍ಫೀಲ್ಡರ್ ಲಿವಾನೊ ಕೊಮೆನೆನ್ಸಿಯಾ ಕ್ಯುರಾಸಾವೊ ಪರ ಗೋಲು ದಾಖಲಿಸಿ ಇತಿಹಾಸ ನಿರ್ಮಿಸಿಸಿದ್ದಾರೆ.

ಒಟ್ಟಿನಲ್ಲಿ ಕ್ಯುರಾಸಾವೊ ದೇಶದ ಫುಟ್‍ಬಾಲ್ ಪಯಣ ಕೇವಲ ಒಂದು ಸಾಧನೆಯಲ್ಲ. ಅದು ಸದಾ ನೆನಪಿನಲ್ಲಿ ಉಳಿಯುವಂತಹ ಚರಿತ್ರೆ. .ಸರಿಯಾದ ದೂರದೃಷ್ಟಿ, ಆಧುನಿಕ ತಂತ್ರಜ್ಞಾನ, ಪ್ರತಿಭೆಗಳನ್ನು ಗುರುತಿಸುವಂತಹ ವ್ಯವಸ್ಥೆಯಿಂದ ಅಸಾಧ್ಯವಾಗಿರುವ ಗುರಿಯನ್ನು ತಲುಪಬಹುದು ಎಂಬುದಕ್ಕೆ ಅತ್ಯುತ್ತಮ ನಿದರ್ಶನ. ಭೌಗೋಲಿಕ ವಿಸ್ತೀರ್ಣ, ಜನಸಂಖ್ಯೆ ಸಾಧನೆ, ಪ್ರತಿಭೆಗೆ ಅಡ್ಡಿಯಾಗಲ್ಲ ಎಂಬುದನ್ನು ಇಡೀ ಜಗತ್ತಿಗೆ ಕ್ಯುರಾಸಾವೊ ದೇಶ ಸಾಬೀತುಪಡಿಸಿದೆ. ಭಾರತ ಸೇರಿದಂತೆ ಫುಟ್‍ಬಾಲ್‍ನಲ್ಲಿ ಫಿಫಾ ವಿಶ್ವಕಪ್‍ನಲ್ಲಿ ಆಡಬೇಕು ಎಂದು ಕನಸು ಕಾಣುತ್ತಿರುವ ರಾಷ್ಟ್ರಗಳಿಗೆ ದೊಡ್ಡ ಪ್ರೇರಣೆ ಹಾಗೂ ಪಾಠವಾಗಿದೆ ಈ ಕೆರೆಬಿಯನ್ ದ್ವೀಪ ರಾಷ್ಟ್ರ ಕ್ಯುರಾಸಾವೊ.

ಸನತ್ ರೈ

Tags: #Curacao football history and tactics#Curaçao's Football team#Dick Advocaat Coach#FIFA World Cup 2026#footballnews#Indian Football#saakshatvFootball
ShareTweetSendShare
Join us on:

Related Posts

kiccha-sudeep-gives-stern-warning-to-modern-manju-and-agni-boys-in-bigg-boss-kannada-promo

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್

by admin
September 21, 2026
0

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್ ಒಳಗೊಂಡ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ...

preetham-gubbi-directs-my-baby-starring-sumukha-and-eesha

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

by admin
September 21, 2026
0

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ ಹೊಸ ತಲೆಮಾರಿನ ಪ್ರೀತಿ, ಅವರದೇ ಆದ ಬದುಕಿನ ಆಯ್ಕೆಗಳು ಮತ್ತು ಒಟ್ಟಿಗೆ ಸಾಗುವ ಪಯಣದ...

shivarajkumar-starrer-bail-official-trailer-released-pawan-wadeyar-kvn-productions

ಆಕ್ಷನ್ ಡ್ರಾಮಾ ‘ಬೇಲ್’ ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆ

by admin
September 21, 2026
0

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ 'ಬೇಲ್' ಚಿತ್ರದ ಅಧಿಕೃತ ಟ್ರೈಲರ್ ಅಂತಿಮವಾಗಿ ಬಿಡುಗಡೆಯಾಗಿದೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್...

allu-arjun-atlee-raka-movie-creates-guinness-world-record-in-motion-capture

ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ: ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್ – ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ‘ರಾಕಾ’ ಚಿತ್ರಕ್ಕೆ ಗಿನ್ನೆಸ್ ವಿಶ್ವ ದಾಖಲೆಯ ಗರಿ!

by admin
September 21, 2026
0

ಹೈದರಾಬಾದ್: ಭಾರತೀಯ ಚಿತ್ರರಂಗದ ತಾಂತ್ರಿಕ ಪಯಣದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕರಾಗಿ ನಟಿಸುತ್ತಿರುವ, ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯದ...

jio-and-t-mobile-launch-worlds-first-5g-standalone-roaming-service

• ಜಿಯೋ ಮತ್ತು ಟಿ-ಮೊಬೈಲ್‌ನಿಂದ ವಿಶ್ವದ ಮೊದಲ 5ಜಿ ರೋಮಿಂಗ್ ಕನೆಕ್ಟಿವಿಟಿ ಒಪ್ಪಂದ

by admin
September 21, 2026
0

ಪ್ರಮುಖಾಂಶಗಳು • ಅಮೆರಿಕ ತಲುಪಿದರೂ ಸಿಗಲಿದೆ 5ಜಿ ಸ್ಟ್ಯಾಂಡ್‌ಅಲೋನ್ ನೆಟ್‌ವರ್ಕ್ ಅನುಭವ ಭಾರತದಿಂದ ಅಮೆರಿಕದವರೆಗೆ ಜಿಯೋ ಜೊತೆಗೇ ಇರಲಿದೆ 5ಜಿ; ಟಿ-ಮೊಬೈಲ್ ಜೊತೆ ತಡೆರಹಿತ ರೋಮಿಂಗ್ ಮುಂಬೈ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram