WV Raman | ಅಯ್ಯರ್ ಇನ್ನಿಂಗ್ಸ್ ಆರಂಭಿಸಬೇಕು
ಐರ್ಲೆಂಡ್ ಸಿರೀಸ್ ನಲ್ಲಿ ಟೀಂ ಇಂಡಿಯಾ ಪರ ವೆಂಕಟೇಶ್ ಅಯ್ಯರ್ ಇನ್ನಿಂಗ್ಸ್ ಆರಂಭಿಸಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವಿವಿ ರಾಮನ್ ಅಭಿಪ್ರಾಯಟ್ಟಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ ವೆಂಕಟೇಶ್ ಅಯ್ಯರ್, ಸ್ವದೇಶದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಸ್ಥಾನಪಡೆದುಕೊಂಡಿದ್ದರು.
ಈ ಸರಣಿಗಳಲ್ಲಿ ವೆಂಕಟೇಶ್ ಅಯ್ಯರ್ ಓಕೆ ಎಂಬಂತೆ ಪ್ರದರ್ಶನ ನೀಡಿದ್ದಾರೆ.

ಐಪಿಎಲ್ ನಲ್ಲಿ ವೆಂಕಟೇಶ್ ಅಯ್ಯರ್ ತೀವ್ರ ನಿರಾಸೆ ಅನುಭವಿಸಿದರು.
ಆದ್ರೂ ದಕ್ಷಿಣ ಆಫ್ರಿಕಾ – ಐರ್ಲೆಂಡ್ ಸರಣಿಗೆ ಅವರನ್ನು ಆಯ್ಕೆಗಾರರು ಆಯ್ಮೆ ಮಾಡಿದರು.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸರಣಿಯಲ್ಲಿ ಅಯ್ಯರ್ ಬೆಂಚ್ ಗೆ ಸೀಮಿತವಾಗಿದ್ದರು.
ಇನ್ನು ಐರ್ಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಲ್ಲಿ ವೆಂಕಟೇಶ್ ಗೆ ಅವಕಾಶ ನೀಡುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.








