ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನಾ ಕೋವಿಡ್ ಗೆ ತುತ್ತಾದ ರೋಹಿತ್ ಶರ್ಮಾ….
ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಕೆಲ ದಿನಗಳು ಭಾಕಿ ಇರುವಂತೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ರೋಹಿತ್ ಶರ್ಮಾ ಕರೋನಾಗೆ ತುತ್ತಾಗಿರುವುದನ್ನ ಬಿಸಿಸಿಐ ಧೃಡಪಡಿಸಿದೆ.
ಶನಿವಾರ ನಡೆಸಿದ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ನಾಯಕ ರೋಹಿತ್ ಶರ್ಮಾ ಪ್ರಸ್ತುತ ತಂಡದ ಹೋಟೆಲ್‌ನಲ್ಲಿ ಐಸೋಲೇಟೆಡ್ ಆಗಿದ್ದಾರೆ, ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಬಿಸಿಸಿಐ ಟ್ವಿಟರ್ ಮೂಲಕ ಈ ಮಾಹಿತಿ ನೀಡಿದೆ.
ಕೆಲ ದಿನಗಳ ಹಿಂದೆ ಭಾರತ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಕೊರೊನಾಗೆ ತುತ್ತಾಗಿದ್ದರು. ಇದರಿಂದಾಗಿ ಅವರು ಉಳಿದ ಆಟಗಾರರೊಂದಿಗೆ ಲಂಡನ್‌ಗೆ ಪ್ರಯಾಣ ಬೆಳೆಸಲು ಸಾಧ್ಯವಾಗಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಕಳೆದ ವಾರ ಲಂಡನ್‌ಗೆ ಆಗಮಿಸಿದ ವಿರಾಟ್ ಕೊಹ್ಲಿ ಕೂಡ ಕರೋನಾ ಸೋಂಕಿಗೆ ಒಳಗಾಗಿದ್ದರು ಎನ್ನಲಾಗಿದೆ. ಈಗ ಅವರೂ ಚೆನ್ನಾಗಿದ್ದಾರೆ.
ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆ ಪಂದ್ಯ ಕರೋನಾ ಕಾರಣದಿಂದಾ ರದ್ದಾಗಿತ್ತು. ಇದೀಗ ಈ ಭಾರಿಯೂ ಕೊನೆಯ ಪಂದ್ಯಕ್ಕೆ ಕರೋನಾ ಭೀತಿ ಎದುರಾಗಿದಿ. ಬಿಸಿಸಿಐ ಎಚ್ಚರಿಕೆಯ ನಡುವೆಯು ಆಟಗಾರರು ಶಾಪಿಂಗ್ ಮಾಡಿದ್ದು ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡಿದ್ದಕ್ಕೆ ಬೆಲೆ ತೆರಬೇಕಾಗಿದೆ.








