ಟಿ 20 ವಿಶ್ವಕಪ್ 2022ಕ್ಕೆ ಇನ್ನೂ ನಾಲ್ಕು ದಿನಗಳು ಮಾತ್ರ ಬಾಕಿ ಇದೆ.
ಈ ಗ್ಯಾಪ್ ನಲ್ಲಿ ಬಲಿಷ್ಠ ಟೀಂ ಇಂಡಿಯಾವನ್ನು ಕಟ್ಟಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೂಲಕ ವಿಶ್ವಕಪ್ ಗೆ ಟೀಂ ಇಂಡಿಯಾ ತಯಾರಾಗುತ್ತಿದೆ.
ಆ ಸಿರೀಸ್ ನಲ್ಲಿ ಇಶಾನ್ ಕಿಶನ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್ ಸೂಪರ್ ಪ್ರದರ್ಶನ ನೀಡಿದ್ದು, ವಿಶ್ವಕಪ್ ತಂಡದಲ್ಲಿ ತಮಗೆ ಅವಕಾಶ ನೀಡಲೇಬೇಕು ಎಂದು ಸಾರಿದ್ದಾರೆ.
ಇನ್ನು ಐರ್ಲೆಂಡ್ ವಿರುದ್ಧದ ಸರಣಿ ಕೂಡ ವಿಶ್ವಕಪ್ ಪ್ಲಾನ್ ನಲ್ಲಿ ಒಂದಾಗಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.
ಮುಂಬರುವ ಟಿ 20 ವಿಶ್ವಕಪ್ ಗಾಗಿ ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದರೇ ಚೆನ್ನಾಗಿರುತ್ತದೆ ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಒಂದು ವಿಷಯ ಕ್ಲಿಯರ್ ಆಗಿದೆ. ಕಾರ್ತಿಕ್ ಆರು ಇಲ್ಲವೇ ಏಳನೇ ಸ್ಥಾನದಲ್ಲಿ ಬಂದು ಫಿನಿಷಿಂಗ್ ಕೆಲಸ ಮಾಡುತ್ತಾರೆ. ಇದು ಜಡೇಜಾವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗಾಗಲೇ ಮೊದಲ ನಾಲ್ಕು ಸ್ಥಾನಗಳು ಫುಲ್ ಫಿಲ್ ಆಗಿದೆ. ಹೀಗಾಗಿ ಐದು, ಆರು, ಏಳನೇ ಸ್ಥಾನಕ್ಕಾಗಿ ಪೈಪೋಟಿದೆ. ದಿನೇಶ್ ಕಾರ್ತಿಕ್ ಗೂ ಮುನ್ನಾ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಗೆ ಬರುತ್ತಾರೆ. ಜೊತೆ ರಿಷಬ್ ಪಂತ್ ಕೂಡ.
ಈ ಮೂವರು ಪ್ಲೇಯಿಂಗ್ ಇಲೆವೆನ್ ನಲ್ಲಿದ್ದಾಗ ಜಡೇಜಾಗೆ ಅವಕಾಶ ಸಿಗೋದು ಕಷ್ಟ ಸಾಧ್ಯ. ಹಾಗಾಗಿಯೇ ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್ ಅವರಿಗೆ ಚಾನ್ಸ್ ಕೊಡಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ.
ಇನ್ನು ರವೀಂದ್ರ ಜಡೇಜಾ ಒಳ್ಳೆಯ ಆಲ್ ರೌಂಡರ್. ಆದ್ರೂ ಟಿ 20 ವಿಶ್ವಕಪ್ ಗೆ ಫರ್ಪೆಕ್ಟ್ ತಂಡವನ್ನು ಆಯ್ಕೆ ಮಾಡೋದಕ್ಕೆ ತ್ಯಾಗಗಳು ಮಾಡಲೇಬೇಕು ಎಂದಿದ್ದಾರೆ.
ಪ್ರಸ್ತುತ ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು, 2024ನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ,ಈ ಸಂಬಂಧ ನಡವಳಿಯನ್ನು...
ವೈಕುಂಠ ಏಕಾದಶಿ ಮಹತ್ವ: ವೈಕುಂಠ ಏಕಾದಶಿ ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠ ದಿನಗಳಲ್ಲಿ ಒಂದಾಗಿದೆ. ಈ ದಿನದಂದು ಶ್ರೀಮನ್ ನಾರಾಯಣನನ್ನು ಭಕ್ತಿಯಿಂದ ಪೂಜಿಸುವ ಮೂಲಕ ಭಕ್ತರು ಪಾಪಮುಕ್ತಿ...
ಬೆಂಗಳೂರು: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ಬೆಂಗಳೂರಿನಲ್ಲಿರುವ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಅಗ್ನಿ ಸುರಕ್ಷತೆ ಅಳವಡಿಸಿಲ್ಲ...
ಶಬರಿಮಲೆ ಯಾತ್ರಾ ಸೀಸನ್ನಲ್ಲಿ ಭಕ್ತರ ಸುರಕ್ಷತೆ ಮತ್ತು ಸುಗಮ ದರ್ಶನಕ್ಕಾಗಿ, ಕೇರಳ ಮತ್ತು ಶಬರಿಮಲೆ ಪೊಲೀಸ್ ಇಲಾಖೆ ಕೆಲವು ಪ್ರಮುಖ ಮುಂಜಾಗ್ರತಾ ಕ್ರಮಗಳನ್ನು ಮತ್ತು ಮಾರ್ಗಸೂಚಿಗಳನ್ನು ಹೊರಡಿಸಿವೆ....
ಬೆಳಗಾವಿ: ಮಹಾತ್ಮ ಗಾಂಧಿಯವರು 1924ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿ.26 ಮತ್ತು 27ರಂದು ಬೆಳಗಾವಿಯಲ್ಲಿ ಶತಮಾನೋತ್ಸವ...