ಟಿ 20 ವಿಶ್ವಕಪ್ 2022ಕ್ಕೆ ಇನ್ನೂ ನಾಲ್ಕು ದಿನಗಳು ಮಾತ್ರ ಬಾಕಿ ಇದೆ.
ಈ ಗ್ಯಾಪ್ ನಲ್ಲಿ ಬಲಿಷ್ಠ ಟೀಂ ಇಂಡಿಯಾವನ್ನು ಕಟ್ಟಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೂಲಕ ವಿಶ್ವಕಪ್ ಗೆ ಟೀಂ ಇಂಡಿಯಾ ತಯಾರಾಗುತ್ತಿದೆ.
ಆ ಸಿರೀಸ್ ನಲ್ಲಿ ಇಶಾನ್ ಕಿಶನ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್ ಸೂಪರ್ ಪ್ರದರ್ಶನ ನೀಡಿದ್ದು, ವಿಶ್ವಕಪ್ ತಂಡದಲ್ಲಿ ತಮಗೆ ಅವಕಾಶ ನೀಡಲೇಬೇಕು ಎಂದು ಸಾರಿದ್ದಾರೆ.
ಇನ್ನು ಐರ್ಲೆಂಡ್ ವಿರುದ್ಧದ ಸರಣಿ ಕೂಡ ವಿಶ್ವಕಪ್ ಪ್ಲಾನ್ ನಲ್ಲಿ ಒಂದಾಗಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.
t20-wc-2022-sanjay-manjrekar-feel-axar-patel-picked-over-jadeja saaksha tv
ಮುಂಬರುವ ಟಿ 20 ವಿಶ್ವಕಪ್ ಗಾಗಿ ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದರೇ ಚೆನ್ನಾಗಿರುತ್ತದೆ ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಒಂದು ವಿಷಯ ಕ್ಲಿಯರ್ ಆಗಿದೆ. ಕಾರ್ತಿಕ್ ಆರು ಇಲ್ಲವೇ ಏಳನೇ ಸ್ಥಾನದಲ್ಲಿ ಬಂದು ಫಿನಿಷಿಂಗ್ ಕೆಲಸ ಮಾಡುತ್ತಾರೆ. ಇದು ಜಡೇಜಾವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗಾಗಲೇ ಮೊದಲ ನಾಲ್ಕು ಸ್ಥಾನಗಳು ಫುಲ್ ಫಿಲ್ ಆಗಿದೆ. ಹೀಗಾಗಿ ಐದು, ಆರು, ಏಳನೇ ಸ್ಥಾನಕ್ಕಾಗಿ ಪೈಪೋಟಿದೆ. ದಿನೇಶ್ ಕಾರ್ತಿಕ್ ಗೂ ಮುನ್ನಾ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಗೆ ಬರುತ್ತಾರೆ. ಜೊತೆ ರಿಷಬ್ ಪಂತ್ ಕೂಡ.
ಈ ಮೂವರು ಪ್ಲೇಯಿಂಗ್ ಇಲೆವೆನ್ ನಲ್ಲಿದ್ದಾಗ ಜಡೇಜಾಗೆ ಅವಕಾಶ ಸಿಗೋದು ಕಷ್ಟ ಸಾಧ್ಯ. ಹಾಗಾಗಿಯೇ ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್ ಅವರಿಗೆ ಚಾನ್ಸ್ ಕೊಡಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ.
ಇನ್ನು ರವೀಂದ್ರ ಜಡೇಜಾ ಒಳ್ಳೆಯ ಆಲ್ ರೌಂಡರ್. ಆದ್ರೂ ಟಿ 20 ವಿಶ್ವಕಪ್ ಗೆ ಫರ್ಪೆಕ್ಟ್ ತಂಡವನ್ನು ಆಯ್ಕೆ ಮಾಡೋದಕ್ಕೆ ತ್ಯಾಗಗಳು ಮಾಡಲೇಬೇಕು ಎಂದಿದ್ದಾರೆ.
ಸುಮಾರು ಒಂದುವರೆ ತಿಂಗಳ ಹಿಂದೆ. ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ...
ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಆರ್‌ಎಸ್,...