India vs Ireland | ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಜಯ..!
ಐರ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಮಳೆಯ ಕಾರಣ ಮೊದಲ ಪಂದ್ಯವನ್ನು 12 ಓವರ್ ಗಳಿಗೆ ಸೀಮಿತ ಮಾಡಲಾಗಿತ್ತು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ಗಳಿಂದ ಜಯ ಸಾಧಿಸಿದೆ.
ಎದುರಾಳಿ ತಂಡ ನಿಗದಿ ಮಾಡಿದ್ದ 109 ರನ್ ಗಳ ಗುರಿಯನ್ನ ಟೀಂ ಇಂಡಿಯಾ 9.2 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತು.
ಟೀಂ ಇಂಡಿಯಾದ ಪರ ಓಪನರ್ ಇಶಾನ್ ಕಿಷನ್ 11 ಎಸೆತಗಳಲ್ಲಿ 26 ರನ್ ಗಳಿಸಿದ್ರೆ, ಮತ್ತೊಬ್ಬ ಓಪನರ್ 29 ಎಸೆತಗಳಲ್ಲಿ 47 ರನ್ ಗಳಿಸಿ ಅಜೇಯರಾಗಿ ಉಳಿದರು.
ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 24 ರನ್ ಗಳಿಸಿದರು.
ಮೂರನೇ ವಿಕೆಟ್ ಗೆ ಹಾರ್ದಿಕ್ ಮತ್ತು ಹೂಡಾ 64 ರನ್ ಗಳ ಜೊತೆಯಾಟವನ್ನಾಡಿದರು.
ಹಾರ್ದಿಕ್ ಔಟ್ ಆದ ಬಳಿಕ ದಿನೇಶ್ ಕಾರ್ತಿಕ್ ಐದು ರನ್ ಗಳಿಸಿ ನಾಟೌಟ್ ಆಗಿ ಉಳಿದರು.
ಅಂದಹಾಗೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 12 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 108 ರನ್ ಗಳಿಸಿತು.
ಭಾರತದ ವೇಗಿಗಳಾದ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಆವೇಶ್ ಖಾನ್ ಐರ್ಲೆಂಡ್ ಟಾಪ್ ಆರ್ಡರ್ ಬ್ಯಾಟರ್ ಗಳನ್ನು ಬೇಗ ಪೆವಿಲಿಯನ್ ಕಳುಹಿಸಿದರು.
ಪರಿಣಾಮ ಐರ್ಲೆಂಡ್ ತಂಡ 22 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಹ್ಯಾರಿ ಟೆಕ್ಟರ್ 64 ರನ್ ಗಳಿಸಿ ತಂಡಕ್ಕೆ ನೆರವಾದರು.
ಭಾರತದ ಪರ ಭುವನೇಶ್ವರ್ ಕುಮಾರ್, ಹಾರ್ದಿಕ್, ಆವೇಶ್, ಚಹಾಲ್ ತಲಾ ಒಂದು ವಿಕೆಟ್ ಪಡೆದರು.
ನಾಳೆ ಎರಡನೇ ಟಿ 20 ಪಂದ್ಯ ನಡೆಯಲಿದೆ.