ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ರಾಜಸ್ಥಾನದ ಉದಯಪುರ ಟೈಲರ್ ಹತ್ಯೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನ ಇದೀಗ ಎನ್ ಐಎಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.. ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಎನ್‌ಐಎಗೆ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಸಂಘಟನೆ ಮತ್ತು ಅಂತರರಾಷ್ಟ್ರೀಯ ಸಂಬಂಧದ ಕುರಿತಂತೆ ಎನ್‌ಐಎ ಸಮಗ್ರ ತನಿಖೆ ನಡೆಸಲಿದೆ ಎಂದು ಗೃಹ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.
ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಮುಸ್ಲಿಂ ಪ್ರವಬಾದಿ ಕುರಿತಾದ ವಿವಾದಾತ್ಮಹ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.. ನೂಪುರ್ ಶರ್ಮಾ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು.. ನೂಪುಉರ್ ಶರ್ಮಾಗೆ ಬೆಂಬಲವೂ ವ್ಯಕ್ತವಾಗಿತ್ತು…
ಅಂತೆಯೇ ನೂಪುರ್ ಅವರನ್ನ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಕನ್ಹಯ್ಯ ಲಾಲ್ ಅವರು ಪೋಸ್ಟ್ ಒಂದನ್ನ ಹಾಕಿದ್ದರು.. ಆನಂತರದಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು.. ಅವರ ಬಂಧನವೂ ಆಗಿತ್ತು.., ನಂತರ ಜಾಮೀನಿನ ಮೇಲೆ ಹೊರಬಂದಿದ್ದರು,. ಇದಾದ ನಂತರದಿಂದ ಅವರಿಗೆ ಸಾಕಷ್ಟು ಕೊಲೆ ಬೆದರಿಕೆಗಳು ಬರತೊಡಗಿತ್ತು ಎನ್ನಲಾಗಿದೆ..
ಇದೀಗ ದುಷ್ಕರ್ಮಿಗಳು ಅವರನ್ನ ಭೀಕರವಾಗಿ ಕೊಲೆಗೈದಿದ್ದು ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.. ಜಸ್ಟೀಸ್ ಫಾರ್ ಕನ್ಹಯ್ಯ ಲಾಲ್ , ಜಾತ್ಯಾತೀತ ಭಾರತ ಟ್ರೆಂಡ್ ಆಗ್ತಿದೆ..
ಈ ಘಟನೆ ಖಂಡಿಸಿ ರಾಜಸ್ಥಾನದ ಜತೆಗೆ ದೇಶದ ವಿವಿಧೆಡೆ ಪ್ರತಿಭಟನೆಗಳು ಆರಂಭವಾಗಿವೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.








