ಗೋವಾದಲ್ಲಿ ಮಜಾ ಮಾಡಲು ಕಿಡ್ನಾಪ್ ಕಥೆ ಕಟ್ಟಿದೆ ಯುವಕ ಅಂದರ್…
ಗೋವಾದಲ್ಲಿ ಮಜಾ ಮಾಡಲು ಕಿಡ್ನಾಪ್ ಕಥೆ ಕಟ್ಟಿ ಪೋಷಕರನ್ನೇ ಯಾಮಾರಿಸಿದ ಯುವಕನ ಕಥೆ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದ್ದು, ಮೋಸ ಮಾಡಲು ಹೊರಟ ಯುವಕ ಅಂದರ್ ಆಗಿದ್ದಾನೆ.
ಉಡುಪಿ ನಗರದ ಹೊರವಲಯದ ಪುತ್ತೂರು ಗ್ರಾಮದ ಅಂಬಾಗಿಲು ನಿವಾಸಿ ವರುಣ್ ಮನೆಯವರಿಗೆ ಫೋನ್ ಮಾಡಿ ನನ್ನನ್ನು ಅಪಹರಣ ಮಾಡಿದ್ದಾರೆ. ಕಿಡ್ನಾಪರ್ಸ್ 5,00,000 ರೂ. ಕೇಳುತ್ತಿದ್ದಾರೆ ಇಲ್ಲದಿದ್ದರೆ ನನ್ನನ್ನು ಕೊಂದೇ ಬಿಡುತ್ತಾರೆ. ಬೇಗ ಹಣ ಅರೇಂಜ್ ಮಾಡಿ ಎಂದು ಹೇಳಿದ್ದಾನೆ. ಗಾಬರಿಗೊಂಡ ಪೋಷಕರು ಕೂಡಲೇ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಫೋನ್ ಲೊಕೇಶನ್ ಪತ್ತೆ ಹಚ್ಚಿದ ಪೊಲೀಸರಿಗೆ ಯುವಕ ಗೋವಾದಲ್ಲಿ ಇರುವುದು ಬೆಳಕಿಗೆ ಬಂದಿದೆ. ಪೊಲೀಸರು ತಂಡ ರಚನೆ ಮಾಡಿಕೊಂಡದು ಗೋವಾಗೆ ತರಳಿದ್ದಾರೆ. ಗೋವಾಗೆ ತೆರಳಿದ್ದ ಪೊಲೀಸರಿಗೆ ಶಾಕ್ ಆಗಿತ್ತು. ಕಾಣೆಯಾಗಿದ್ದೇನೆ ಎಂದು ಫೋನ್ ಮಾಡಿದ್ದ ವರುಣ್ ನಾಯಕ್, ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ನಿರತನಾಗಿದ್ದ.
ಗೋವಾದ ಕ್ಯಾಸಿನೋದಲ್ಲಿ ಆಟವಾಡುತ್ತಿದ್ದ ಯುವಕ, ಪೋಷಕರಲ್ಲಿದ್ದ ಹಣ ದೋಚಲು ಸಂಚು ಮಾಡಿದ್ದ. ಇದನ್ನು ಯುವಕ ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಪೋಷಕರ ಹಣ ಎಗರಿಸುವ ಸಂಚು ಮಾಡಿದ್ದ ಯುವಕ ಉಡುಪಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಂಚಕ ಯುವಕನಿಗೆ 15 ದಿನಗಳ ನ್ಯಾಯಾಂಗ ಬಂಧನವಾಗಿದೆ. ಪೊಲೀಸರಿಗೆ ಯಾಮಾರಿಸಿರುವ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








