ಕೋವಿಡ್ ನಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇದೀಗ 2 ವರ್ಷಗಳ ಬಳಿಕ ಗುರುವಾರದಿಂದ ಆರಂಭವಾಗಲಿದೆ.. ಇನ್ನೂ ಅಮರನಾಥ ಯಾತ್ರಿಗಳಿಗೆ ನಿಜವಾದ ಭದ್ರತೆಯನ್ನು ಕಾಶ್ಮೀರದ ಜನರು ಒದಗಿಸುತ್ತಾರೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಯಾತ್ರೆಯ ಮಾರ್ಗದಲ್ಲಿ ಅಂಗಡಿಗಳನ್ನು ಮುಚ್ಚುವುದು ಸೇರಿದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮೆಹಬೂಬಾ ಮುಫ್ತಿ, ಎರಡು ವರ್ಷಗಳ ನಂತರ ಅಮರನಾಥ ಯಾತ್ರೆಯು ಪುನರಾರಂಭಗೊಳ್ಳುತ್ತಿದೆ. ಕಾಶ್ಮೀರಿಗಳು ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ ಎಂದು ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ..
ದೇಶಾದ್ಯಂತ ಆಕ್ರೋಶ ಹೆಚ್ಚಪಿಸಿರುವ ಉದಯಪುರ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಪ್ರರಣದ ಆರೋಪಿಯನ್ನ ಎನ್ ಕೌಂಟರ್ ಮಾಡುವಂತೆ , ಕನ್ಹಯ್ಯ ಲಾಲ್ ಅವರ ಪುತ್ರ ಒತ್ತಾಯಿಸಿದ್ದಾರೆ,..
ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ನೇರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕನ್ಹಯ್ಯ ಲಾಲ್ ಪುತ್ರ , ತಂದೆಯನ್ನು ಹತ್ಯೆ ಮಾಡಿರುವ ಕೊಲೆಗಾರರ ಎನ್‌ಕೌಂಟರ್ ಮಾಡಬೇಕು , ಇಲ್ಲವೇ ಅವರನ್ನು ಗಲ್ಲಿಗೇರಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಅವರಲ್ಲಿ ಭಯವನ್ನು ಹುಟ್ಟುಹಾಕಲು ಈ ರೀತಿಯ ಶಿಕ್ಷೆ ಅಗತ್ಯವಿದೆ ಎಂದಿದ್ದಾರೆ..
ಬಿಜೆಪಿ ನಾಯಕಿ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಕನ್ಹಯ್ಯ ಲಾಲ್ ಅವರನ್ನ ಮಾಲ್ದಾಸ್ ಸ್ಟ್ರೀಟ್ ಪ್ರದೇಶದಲ್ಲಿ ಇಬ್ಬರು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿದ್ದು , ದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ.. ಜೊತೆಗೆ ಜಸ್ಟೀಸ್ ಫಾರ್ ಕನ್ಹಯ್ಯಲಾಲ್ ಟ್ರೆಂಡ್ ಆಗ್ತಿದೆ..








