ಸರ್ಕಾರಿ ಶಾಲೆ ಮಕ್ಕಳಿಗೂ ಶಾಲಾ ವಾಹನ – ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್….
ಸರ್ಕಾರಿ ಶಾಲೆ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ದೂರದ ಊರುಳಿಂದ ಶಾಲೆಗೆ ಬರುವ ಮಕ್ಕಳಿಗೆ ಅನುಕೂಲವಾಗಲಿದೆ ರಾಜ್ಯ ಸರ್ಕಾರ ಹೊಸ ಯೋಜನೆಯೊಂದನ್ನ ಪ್ರಾರಂಭಿಸುತ್ತಿದೆ.
ಗ್ರಾಮೀಣ ಭಾಗದ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿ ದೂರದ ಊರುಗಳಿಂದ ಬರುವವರಾದ್ರೆ ಖಾಸಗಿ ಬಸ್, ಆಟೋ, ಅಥವಾ ಖಾಸಗಿ ವಾಹನಗಳೇ ಗತಿ. ಆದರೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆಯೇ ಇರುತ್ತದೆ. ಇದರಿಂದ ಬಸ್ ಅನುಕೂಲಕ್ಕಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗ ಸೇರಿಸಲು ಮುಂದಾಗುತ್ತಿದ್ರು. ಈ ಹಿನ್ನೆಲೆ ಸರ್ಕಾರಿ ಶಾಲೆಯ ಮಕ್ಕಳಿಗೂ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂಬ ಕೂಗು ಕೇಳಿ ಬಂದಿತ್ತು.
ಇದೀಗ ರಾಜ್ಯ ಸರ್ಕಾರ ಶಾಲಾ ವಾಹನ ಖರೀದಿಗೆ ಅನುಮತಿ ನೀಡಿದೆ. ಸರ್ಕಾರಿ ಶಾಲೆಗಳ ಶಾಲಾ ಮಕ್ಕಳನ್ನು ದೂರದ ಊರುಗಳಿಂದ ಕರೆದುಕೊಂಡು ಬರುವುದಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅವರು ಸರ್ಕಾರಿ ಶಾಲಾ ವಾಹನ ಖರೀದಿಗೆ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಮಾತ್ರ ಶಾಲಾ-ವಾಹನವನ್ನು ಮಕ್ಕಳನ್ನು ಕರೆತರುವ ಅನುಮತಿ ನೀಡಲಾಗಿದೆ. ಯಾವ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇರಲ್ಲವೋ ಅಲ್ಲಿಯ ಶಾಲೆಗಳು ಮಾತ್ರ ಬಸ್ ಖರೀದಿಸಬಹುದಾಗಿದೆ. ಶಾಲಾ- ವಾಹನ ಖರೀದಿಸಲು ತಗಲುವ ವೆಚ್ಚವನ್ನು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಭರಿಸಲು ಅವಕಾಶ ನೀಡಲಾಗಿದೆ. ಶಾಲಾ ವಾಹನಕ್ಕೆ ಖರ್ಚು (ವಾಹನ ಚಾಲಕರ ವೇತನ ಹಾಗೂ ಪೆಟ್ರೋಲ್, ಡೀಸೆಲ್, ದುರಸ್ಥಿ) ವೆಚ್ಚ SDMC ಅನುದಾನದಡಿ ಭರಿಸಲು ಸೂಚನೆ ನೀಡಲಾಗಿದೆ.








