ಬೆಂಗಳೂರು : ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್ಲೈನ್ ತರಗತಿಗಳ ಮೂಲಕ ನೀಡುವ ಪ್ರಧಾನಿ ಅವರ ಪ್ರಸ್ತಾಪ ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಆಲೋಚನೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ಈ ಪ್ರಸ್ತಾಪದಿಂದ ಸಮಾಜದ ಕೆಲ ವರ್ಗಗಳು ಶಿಕ್ಷಣದಿಂದ ವಂಚಿತವಾಗುತ್ತವೆ. ಭಾರತದ ಅಸ್ತಿತ್ವ ಇರುವುದು ಹಳ್ಳಿಗಳಲ್ಲಿ. ಹಳ್ಳಿಗಳಲ್ಲಿ ಕಂಪ್ಯೂಟರ್, ಲ್ಯಾಪ್ಟಾಪ್ ಹಾಗೂ ಸ್ಮಾರ್ಟ್ ಫೋನುಗಳು ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದ್ದಾರೆ. ಫೋನುಗಳಿದ್ದರೂ ನೆಟ್ವರ್ಕ್ ಎಲ್ಲಿದೆ? ಆನ್ಲೈನ್ ಶಿಕ್ಷಣದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಹೇಗೆ? ದೇಶ ಆಳುವ ನಾಯಕರಿಗೆ ಪ್ರಾಥಮಿಕ ಜ್ಞಾನ ಬೇಡವೇ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.








