ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ತತ್ತರಿಸಿ ಹೋಗಿದ್ದ ಆಟೋ-ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ 5000 ಸಹಾಯ ಧನವನ್ನು ಆರ್ ಟಿಓ ನಾಳೆಯಿಂದ ಅವರ ಖಾತೆಗೆ ಹಂತ ಹಂತವಾಗಿ ಜಮಾ ಮಾಡಲಿದೆ.
ರಾಜ್ಯ ಸರ್ಕಾರ ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿದ್ದ ಆಟೋ ಟ್ಯಾಕ್ಸಿ ಚಾಲಕರ ಖಾತೆಗೆ 5000 ಸಹಾಯ ಧನ ನೀಡುವುದಾಗಿ ಘೋಷಣೆ ಮಾಡಿತ್ತು. ಘೋಷಣೆಯಾಗಿ ಒಂದು ವಾರ ಕಳೆದರೂ ಹಣ ಕೈ ಸೇರುವ ನಿರೀಕ್ಷೆ ಹುಸಿಯಾಗಿತ್ತು. ಇದರಿಂದಾಗಿ ಕೆರಳಿದ ಚಾಲಕರು ಸಾರಿಗೆ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದ್ದರು. ಆದರೀಗ ಆಟೋ-ಟ್ಯಾಕ್ಸಿ ಚಾಲಕರಿಗೆ ಆರ್ ಟಿಓ ಗುಡ್ ನ್ಯೂಸ್ ನೀಡಿದ್ದು, ನಾಳೆಯೇ ಚಾಲಕರ ಖಾತೆಗೆ ಹಂತ ಹಂತವಾಗಿ ಎರಡು ದಿನದಲ್ಲಿ ಪರಿಹಾರ ಹಣ ಜಮಾ ಮಾಡಲಿದೆ.
ಈಗಾಗಲೇ 1.77 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರಿಂದ ಅರ್ಜಿ ಬಂದಿವೆ. ನಾಳೆ ಸುಮಾರು 40 ಸಾವಿರ ಚಾಲಕರಿಗೆ ಹಣ ಜಮಾ ಮಾಡಲಾಗುತ್ತಿದ್ದು, ಸರ್ಕಾರದಿಂದ 20 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದವರ ಖಾತೆಗೆ ಈ ಸಹಾಯಧನ ಸೇರಲಿದೆ.








