South Africa – ಜೋಹಾನ್ಸ್ಬರ್ಗ್ನ ಬಾರ್ ನಲ್ಲಿ ಗುಂಡಿನ ದಾಳಿ – 14 ಮಂದಿ ಮೃತ…
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನ ಸೊವೆಟೊ ಟೌನ್ಶಿಪ್ನಲ್ಲಿರುವ ಬಾರ್ನಲ್ಲಿ ನಡೆದ ಗುಂಡಿನ ಚಕಮಕಿ ನಡೆದಿದ್ದು ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಶನಿವಾರ-ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಅಲ್ಲಿಗೆ ತಲುಪಿವುವೇಳೆಗಾಗಲೇ 12 ಮಂದಿ ಸಾವನ್ನಪ್ಪಿದ್ದರು. 11 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಇನ್ನೂ 2 ಜನರು ಸಾವನ್ನಪ್ಪಿದರು. ಸ್ಥಳದಲ್ಲಿ ಪತ್ತೆಯಾದ ಕಾಟ್ರಿಡ್ಜ್ಗಳ ಪ್ರಕಾರ ಗುಂಪಾಗಿ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿ ಇಲ್ಯಾಸ್ ಮಾವೆಲಾ ಹೇಳಿದ್ದಾರೆ. ಇಡೀ ಪ್ರದೇಶವನ್ನು ಸೀಲ್ ಮಾಡಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
https://twitter.com/i/status/1546057404193722368
ಸ್ಥಳದಲ್ಲಿದ್ದ ಕೆಲವು ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ರಾತ್ರಿ ಒಂದು ಗಂಟೆಯ ಸುಮಾರಿಗೆ ಮಿನಿ ಬಸ್ ನಲ್ಲಿ ಬಂದ ಪುರುಷರ ಗುಂಪು ಗುಂಡಿನ ದಾಳಿ ನಡೆಸಿದೆ. ಗುಂಡು ಹಾರಿದ ತಕ್ಷಣ ಕಾಲ್ತುಳಿತ ಉಂಟಾಗಿ ಜನರು ಓಡಲಾರಂಭಿಸಿದರು. ಯಾಕೆ ಈ ದಾಳಿ ಮಾಡಿರು ತಿಳಿದಿಲ್ಲ ಎಂದು ಎಂದಿದ್ದಾರೆ..








