ಕೇರಳ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನಾಗಿ ಟೀಮ್ ಇಂಡಿಯಾದ ಮಾಜಿ ವೇಗಿ ಟೀನೂ ಯೋಹಾನನ್ ಅವರು ಆಯ್ಕೆಯಾಗಿದ್ದಾರೆ. ಕೇರಳ ಕ್ರಿಕೆಟ್ ಸಂಸ್ಥೆಯು ಟಿನು ಯೋಹಾನನ್ ಅವರು ಡೇವ್ ವಾಟ್ಮೋರ್ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದೆ. ಆಸ್ಟ್ರೇಲಿಯಾದ ಡೇವ್ ವಾಟ್ಮೋರ್ ಅವರು ಬರೋಡಾ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಇದು ನನಗೆ ಸಿಕ್ಕಿರುವ ದೊಡ್ಡ ಗೌರವ. ಹಾಗೇ ಸವಾಲು ಕೂಡ ಇದೆ. ಈಗಾಗಲೇ ಟೀನೂ ಯೋಹಾನನ್ ಅವರು ಕೇರಳ ಕ್ರಿಕೆಟ್ ಸಂಸ್ಥೆಯ ನಿರ್ದೇಶಕನಾಗಿದ್ದಾರೆ. 2014ರಲ್ಲಿ ಬೌಲಿಂಗ್ ಕೋಚ್ ಆಗಿದ್ದ 2016ರಲ್ಲಿ ಹೆಡ್ ಕೋಚ್ ಆಗಿದ್ದರು. ಆ ನಂತರ ವಾಟ್ಮೋರ್ ಟೀನೂ ಯೋಹಾನನ್ ಅವರ ಜಾಗವನ್ನು ಆಕ್ರಮಿಸಿಕೊಂಡಿದ್ದರು. ಇದೀಗ ಎರಡನೇ ಬಾರಿ ಟೀನೂ ಯೋಹಾನನ್ ಅವರು ಕೇರಳ ತಂಡದ ಹೆಡ್ ಕೋಚ್ ಆಗಿದ್ದಾರೆ.
ಕೇರಳ ಪರ 59 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿರುವ ಟೀನೂ ಯೋಹಾನನ್ ಅವರು 145 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ 2001ರಲ್ಲಿ ಟೀಮ್ ಇಂಡಿಯಾ ಪರ ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಒಟ್ಟು ಮೂರು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಿರುವ ಟೀನೂ ಯೋಹಾನನ್ ಅವರು ತಲಾ ಐದು ವಿಕೆಟ್‍ಗಳನ್ನು ಉರುಳಿಸಿದ್ದಾರೆ. ಅಲ್ಲದೆ ಕೇರಳದಿಂದ ಟೀಮ್ ಇಂಡಿಯಾದಲ್ಲಿ ಆಡಿದ ಮೊದಲ ಆಟಗಾರನೂ ಆಗಿದ್ದಾರೆ. 1976ರಲ್ಲಿ ಲಾಂಗ್ ಜಂಪ್‍ನಲ್ಲಿ ಮಾಂಟ್ರಿಯಲ್ ಓಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಟಿ.ಸಿ. ಯೋಹಾನನ್ ಅವರ ಮಗ ಟೀನೂ ಯೋಹಾನನ್.
ನನಗೆ ಗೊತ್ತು. ಸಾಕಷ್ಟು ನಿರೀಕ್ಷೆಗಳಿವೆ. ಕಳೆದ ಋತುವಿನಲ್ಲಿ ಕೇರಳ ತಂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದೀಗ ಹೊಸ ಸವಾಲು. ಹಾಗೇ ಮತ್ತೊಂದು ಅವಕಾಶ ಕೂಡ ಸಿಕ್ಕಿದೆ. ತಂಡದ ಬಹುತೇಕ ಆಟಗಾರರು ನನಗೆ ಗೊತ್ತಿರುವವರು. ಇದು ನನಗೆ ಸ್ವಲ್ಪ ಮಟ್ಟಿಗೆ ಸುಲಭವಾಗಲಿದೆ. ಹಿರಿಯ ಆಟಗಾರರಾದ ರೋಹನ್ ಪ್ರೇಮ್, ಸಚಿನ್ ಬಾಬಿ ಜೊತೆ ಆಡಿದ್ದೇನೆ. ಹಾಗೇ ರಾಬಿನ್ ಉತ್ತಪ್ಪ ವಿರುದ್ಧನೂ ಆಡಿದ್ದೇನೆ. ಇದ್ರಿಂದ ನನಗೆ ಅವರ ಜೊತೆ ಬೆರೆಯುವುದು ದೊಡ್ಡ ವಿಷ್ಯವೇನಲ್ಲ ಅಂತ ಟೀನೂ ಯೋಹಾನನ್ ಹೇಳಿದ್ರು.








