ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರೋ ರಾವಣನ ನಾಡು ಲಂಕಾ ಪ್ರತಿಭಟನಾಕಾರರ ಆಕ್ರೋಶ , ದಂಗೆಗಳಿಂದ ದಹನವಾಗ್ತಿದೆ.. ಗೋಟಬಯ ರಾಜಪಕ್ಸೆ ದೇಶದಿಂದ ಪರಾರಿಯಾದ ಬೆನ್ನಲ್ಲೇ ಇದೀಗ ಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ..
ಗೊಟಬಯಾ ರಜಪಕ್ಸೆ ಅವರು ರಾಜೀನಾಮೆ ನೀಡಿದ ನಂತರ ಹಂಗಾಮಿ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ನೇಮಕಗೊಂಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆರು ಬಾರಿ ಪ್ರಧಾನಿಯಾಗಿರುವ ವಿಕ್ರಮಸಿಂಘೆ ಅವರು 225 ಸದಸ್ಯರ ಸಂಸತ್ತಿನಲ್ಲಿ ಅತಿದೊಡ್ಡ ಬಣವಾದ ರಾಜಪಕ್ಸೆಗಳ ಎಸ್‌ಎಲ್‌ಪಿಪಿಯಿಂದ ಬೆಂಬಲಿತರು..








