Rahul Gandhi | ಕಡಿಮೆ ಅಡುಗೆ ಮಾಡಿ, ಕಡಿಮೆ ತಿನ್ನಿ – ಜನರಿಗೆ ‘ಗಬ್ಬರ್’ನ ಸಲಹೆಗಳು
ನವದೆಹಲಿ : ರೂಪಾಯಿ ಮೌಲ್ಯ ಕುಸಿತ, ಬೆಲೆ ಏರಿಕೆ, ಜಿಎಸ್ ಟಿ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಸಮರ ಮುಂದುವರೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಹುಲ್ ಗಾಂಧಿ, ರೂಪಾಯಿ 80ಕ್ಕೆ ತಲುಪಿದೆ.
ಗ್ಯಾಸ್ ಬೆಲೆ ₹ ಸಾವಿರಕ್ಕೆ ಬಂದಿದೆ. ಜೂನ್‌ನಲ್ಲಿ 1.3 ಕೋಟಿ ನಿರುದ್ಯೋಗಿಗಳಾಗಿದ್ದಾರೆ.
ಆಹಾರ ಧಾನ್ಯಗಳ ಮೇಲೂ ಜಿಎಸ್‌ಟಿ ಹೊರೆ. ಜನಪರ ಧ್ವನಿ ಎತ್ತುವುದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
महंगाई से जूझती जनता के लिए 'गब्बर' की रेसिपी:
कम बनाओ, कम खाओ, जुमलों के तड़के से भूख मिटाओ।
'मित्रों' की अनकही बातें तक सुनने वाले प्रधानमंत्री को अब जनता की बात सुननी भी होगी और ये GST वापस लेना भी होगा। pic.twitter.com/rsOia8Gwie
— Rahul Gandhi (@RahulGandhi) July 20, 2022
ಸರ್ಕಾರ ಉತ್ತರ ಕೊಡಲೇಬೇಕು. ಸಂಸತ್ತಿನಲ್ಲಿ ಚರ್ಚೆ ಮತ್ತು ಪ್ರಶ್ನೆಗಳಿಂದ ಪಲಾಯನ ಮಾಡುವುದು ‘ಅಸಂಸದೀಯ’ ಪ್ರಧಾನಿ
ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರಿಗೆ ‘ಗಬ್ಬರ್’ನ ಸಲಹೆಗಳು.
ಕಡಿಮೆ ಅಡುಗೆ ಮಾಡಿ, ಕಡಿಮೆ ತಿನ್ನಿ, ಜುಮ್ಲಾಗಳಿಂದ ಹಸಿವು ನೀಗಿಸಿಕೊಳ್ಳಿ.
ತಮ್ಮ ‘ಗೆಳೆಯರ’ ಹೇಳದಿರುವ ಮಾತುಗಳಿಗೂ ಕಿವಿಗೊಡುವ ಪ್ರಧಾನಿಗಳು ಈಗ ಜನಸಾಮಾನ್ಯರ ಮಾತನ್ನೂ ಕೇಳಿಸಿಕೊಳ್ಳಲೇ ಬೇಕು,
ಈ GSTಯನ್ನು ಹಿಂದಕ್ಕೆ ಪಡೆಯಬೇಕಿದೆ ಎಂದು ಆಗ್ರಹಿಸಿದ್ದಾರೆ.








