BCCI – Virat Kohli ಗಾಗಿ ಸರಣಿ… ಏನಿದು ಬಿಸಿಸಿಐ ಮಾಸ್ಟರ್ ಪ್ಲಾನ್..?
ಕಳೆದ ಕೆಲವು ತಿಂಗಳುಗಳಿಂದ ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಅವರನ್ನು ಮತ್ತೆ ಫಾರ್ಮ್ ಗೆ ಕರೆತರಲು ಬಿಸಿಸಿಐ ಭರ್ಜರಿ ಪ್ಲಾನ್ ಮಾಡಿಕೊಂಡಿದೆ.
ಕೊಹ್ಲಿಯನ್ನ ಹಳೆ ಖದರ್ ಗೆ ತರಲು ಒಂದು ಸಣ್ಣ ತಂಡದ ವಿರುದ್ಧ ಏಕದಿನ ಸರಣಿ ಆಡಿಸೋದಕ್ಕೆ ಸೆಲೆಕ್ಷನ್ ಕಮಿಟಿ ಮುಂದಾಗಿದೆ.
ಇದರ ಭಾಗವಾಗಿ ಏಷ್ಯಾ ಕಪ್ ಗೂ ಮುನ್ನಾ ಜಿಂಬಾಬೆ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಅವರನ್ನ ಆಯ್ಕೆ ಮಾಡಬೇಕೆಂದು ನಿರ್ಧಾರ ಮಾಡಲಾಗಿದೆ.
ಮೂರು ವರ್ಷಗಳಿಂದ ಸೆಂಚೂರಿ ಇಲ್ಲದೇ ಪರದಾಡುತ್ತಿರುವ ವಿರಾಟ್ ಕೊಹ್ಲಿ ಜಿಂಬಾಬೆ ಸರಣಿಯಲ್ಲಿ ಫಾರ್ಮ್ ಗೆ ಮರಳಬಹುದು ಎಂದು ಬಿಸಿಸಿಐ ಅಂದಾಜಿಸಿದೆ.

ಅಂದಹಾಗೆ ಇತ್ತೀಚೆಗೆ ಮುಗಿದ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ರು.
ಆದ್ರೆ ಕೊಹ್ಲಿ ಎಲ್ಲರ ನಿರೀಕ್ಷೆಗಳು ಹುಸಿಗೊಳಿಸಿದ್ರು. ಇಂಗ್ಲೀಷರ ನೆಲದಲ್ಲೂ ವಿರಾಟ್ ಕೊಹ್ಲಿ ಕಳಫೆ ಫಾರ್ಮ್ ಮುಂದುವರೆಸಿದರು.
ಟೆಸ್ಟ್, ಏಕದಿನ, ಟಿ 20 ಸರಣಿಯಲ್ಲಿ ಒಟ್ಟಾರೆ ವಿರಾಟ್ ಕೊಹ್ಲಿ 76 ರನ್ ಮಾತ್ರ ಗಳಿಸಿದ್ರು.
ಆಗಸ್ಟ್ 18 ರಿಂದ 22 ವರೆಗೂ ಟೀಂ ಇಂಡಿಯಾ ಜಿಂಬಾಬೆ ಪ್ರವಾಸ ಕೈಗೊಳ್ಳಲಿದೆ.
ಆ ನಂತರ ಆಗಸ್ಟ್ 27 ರಿಂದ ಏಪ್ಯಾಕಪ್ ಪ್ರಾರಂಭವಾಗಲಿದೆ.








