IND vs WI Series 2022 : ಇಂಡೋ – ವಿಂಡೀಸ್ ಕಾಳಗ : ಭಾರತದ ಪ್ಲೇಯಿಂಗ್ 11
ಪೋರ್ಟ್ ಆಫ್ ಸ್ಪೇನ್ ವೇದಿಕೆ ಭಾರತ ಮತ್ತು ವೆಸ್ಟ್ ಇಂಡೀಸ್ ಕಾಳಗಕ್ಕೆ ಸಜ್ಜಾಗಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ ಪ್ರಿತ್ ಬುಮ್ರಾ, ಶಮಿ, ರಿಷಬ್ ಪಂತ್ , ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಇಂದು ಕೆರಿಬಿಯನ್ನರನ್ನು ಎದುರಿಸಲಿದೆ.
ಕಳೆದ ವರ್ಷದ ಶ್ರೀಲಂಕಾ ಪ್ರವಾಸದ ಬಳಿಕ ಟೀಂ ಇಂಡಿಯಾದ ಹಿರಿಯ ಆಟಗಾರ ಶಿಖರ್ ಧವರ್ ಭಾರತ ತಂಡವನ್ನು ಮುನ್ನೆಡಸಲಿದ್ದಾರೆ.
ನಿಕೋಲಸ್ ಪೂರನ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗಿದೆ.
ಇದರ ಲಾಭವನ್ನು ಟೀಂ ಇಂಡಿಯಾ ಪಡೆದುಕೊಳ್ಳಬಹುದು.

ಭಾರತದ ಪರ ಶಿಖರ್ ಆರಂಭಿಕಾದ್ರೆ ಮತ್ತೊಬ್ಬ ಆರಂಭಿಕರಾಗಿ ರುತುರಾಜ್ ಗಾಯಕ್ವಾಡ್ ಕಣಕ್ಕಿಳಿಯಬಹುದು.
ಆ ಮೂಲಕ ಗಾಯಕ್ವಾಡ್ ಏಕದಿಕ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಸಾಧ್ಯತೆಗಳಿವೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶನ್ ಕಾಣಿಸಿಕೊಳ್ಳಬಹುದು.
ನಾಲ್ಕನೇ ಕ್ರಮಾಂಕದಲ್ಲಿ ಐರ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಅಬ್ಬರಿಸಿದ್ದ ದೀಪಕ್ ಹೂಡಾಗೆ ಅವಕಾಶ ಪಕ್ಕಾ.
ಐದನೇ ಕ್ರಮಾಂಕದಲ್ಲಿ ಟೀಂ ಇಂಡಿಯಾದ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಸೂರ್ಯ ಕುಮಾರ್ ಯಾದವ್, ಆರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಆಲ್ ರೌಂಡರ್ ವಿಭಾದಲ್ಲಿ ರವೀಂದ್ರ ಜಡೇಜಾ, ಶರ್ದೂಲ್ ಠಾಕೂರ್, ವೇಗಿಗಳಾಗಿ ಪ್ರಸಿದ್ಧ ಕೃಷ್ಣಾ, ಆವೇಶ್ ಖಾನ್, ಸ್ಪಿನ್ನರ್ ಆಗಿ ಯುಜವೇಂದ್ರ ಚಹಾಲ್ ಕಣಕ್ಕಿಳಿಯಲಿದ್ದಾರೆ.








