Samantha | ನಾಗ ಚೈತನ್ಯ ಜೊತೆ ವಿಚ್ಛೇದನ : ಆಗ ನಡೆದಿದ್ದೇನು ಅಂತಾ ತಿಳಿಸಿದ ಸ್ಯಾಮ್
ಸಮಂತಾ – ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ.
ಪ್ರೀತಿಸಿ ಮದುವೆಯಾದ ಈ ಜೋಡಿ ಮದುವೆಯ ನಂತರ ವಿಚ್ಛೇದನ ಪಡೆದುಕೊಂಡು ಅಚ್ಚರಿಯನ್ನುಂಟು ಮಾಡಿದ್ರು.
ಆದ್ರೆ ಇವರ ವಿಚ್ಛೇದನಕ್ಕೆ ಕಾರಣವೇನು ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ.
ಆದ್ರೆ ಇದರಲ್ಲಿ ಸಮಂತಾ ಅವರದ್ದೇ ತಪ್ಪು ಅಂತ ಆರಂಭದಲ್ಲಿ ಎಲ್ಲರೂ ಅಂದುಕೊಂಡಿದ್ದರು.
ಈ ನಡುವೆ ಬಾಲಿವುಡ್ ಪಾಪುಲರ್ ಶೋ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಸಮಂತಾ, ಹೀರೋ ಅಕ್ಷಯ್ ಕುಮಾರ್ ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿಚ್ಛೇದನದ ಬಗ್ಗೆ ಪ್ರಶ್ನೆ ಕೇಳಲಾಯ್ತು.
ಇದಕ್ಕೆ ಸ್ಪಂದಿಸಿದ ಸ್ಯಾಮ್, ನಮ್ಮ ವಿಚ್ಛೇದನ ಸಾಮರಸ್ಯವಾಗಿ ನಡೆಯಲಿಲ್ಲ.

ವಿಚ್ಛೇದನ ಪ್ರಕ್ರಿಯೆ ತುಂಬಾ ಕಷ್ಟಕರವಾಗಿತ್ತು. ವಿಚ್ಛೇದನ ಪಡೆದ ಆರಂಭದಲ್ಲಿ ನೋವು ಅನುಭವಿಸಿದೆ.
ಜೀವನ ತುಂಬಾ ಕಠಿಣ ಅನಿಸಿತ್ತು. ಆದ್ರೆ ಈಗ ಅದರಿಂದ ಹೊರಗಡೆ ಬಂದಿದ್ದೇನೆ.
ಈ ಮೊದಲಿಗಿಂತಲೂ ಬಲವಾಗಿದ್ದೇನೆ. ಪ್ರಸ್ತುತ ನನ್ನ ಕೆಲಸವನ್ನು ನಾನು ಮಾಡಿಕೊಂಡು ಹೋಗುತ್ತಿದ್ದೇನೆ.
ಆದ್ರೆ ವಿಚ್ಛೇದನದ ನಂತರ ಒಬ್ಬರ ಮೇಲೆ ಒಬ್ಬರು ತೀವ್ರ ಮನೋವೇದನಕ್ಕೆ ಒಳಗಾಗಿದ್ದೇವು ಅಂತಾ ಸಮಂತಾ ತಿಳಿಸಿದ್ದಾರೆ.
ಇನ್ನು 250 ಕೋಟಿ 250 ಕೋಟಿ ಜೀವನಾಂಶ ತೆಗೆದುಕೊಂಡಿರುವ ಸುದ್ದಿಗೆ ಪ್ರತಿಕ್ರಿಯಿಸಿ.. ‘ನಾನು 250 ಕೋಟಿ ತೆಗೆದುಕೊಂಡಿದ್ದೇನೆ ಎಂದು ಹಲವು ವದಂತಿಗಳು ಹಬ್ಬಿದ್ದವು.
ಆದರೆ ಆ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಈ ವದಂತಿಗಳು ಬಂದಾಗ ಐಟಿ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ಮಾಡುತ್ತಾರೆ ಎಂದು ಕಾಯುತ್ತಿದ್ದೆ’ ಎಂದು ತಮಾಷೆ ಮಾಡಿದ್ದಾರೆ.








