ಕ್ರಿಕೆಟ್ ಸಮಿತಿಯಲ್ಲಿ ಜವಬ್ದಾರಿ ನೀಡದಕ್ಕೆ ಸೆಲ್ಫಿ ಮಾಡಿ ಯುವಕ ಆತ್ಮಹತ್ಯೆ..
ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಜವಾಬ್ದಾರಿ ನೀಡಿಲ್ಲ ಎನ್ನುವ ಕಾರಣಕ್ಕೆ ಮನನೊಂದು ಯುವಕನೊಬ್ಬ ತುಂಗಭದ್ರಾ ನದಿಗೆ ಹಾರಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಮುಂಡರಗಿ ಪಟ್ಟಣದ ಗೊಂದಳಿ ಓಣಿಯ ವಿಶ್ವನಾಥ್ ಗಣಾಚಾರಿ (26) ಆತ್ಮಹತ್ಯೆ ಮಾಡಿಕೊಂಡ ಯುವಕ. 1 ನಿಮಿಷ 55 ಸೆಕೆಂಡ್ ನ ಸೆಲ್ಫಿ ವಿಡಿಯೋದಲ್ಲಿ ನೀವು ಅನ್ಯಾಯ ಮಾಡಿದ್ದೀರಿ. ನೀವು ಮಾಡಿದ ದ್ರೋಹ ಮರೆಯಲ್ಲ ಅಂತಾ ರೆಕಾರ್ಡ್ ಮಾಡಿದ್ದಾರೆ. ನನಗೆ ಈಜು ಬರುತ್ತೆ. ಈಜುತ್ತೇನೆ. ಇಲ್ಲ ನಕ್ಷತ್ರ ಮುಟ್ಟುತ್ತೇನೆ ಅಂತಾ ರೆಕಾರ್ಡ್ ಮಾಡಿಟ್ಟು ನದಿಗೆ ಹಾರಿದ್ದಾನೆ.
ವಿಶ್ವನಾಥ್ ಗಣಾಚಾರಿ ಸ್ಥಳಿಯ ಸಮಿತಿ ಕ್ರಿಕೆಟ್ ತಂಡದ ಸದಸ್ಯನಾಗಿದ್ದು, ಸಮಿತಿ ಹಾಗು ಟೂರ್ನಿಂಮೆಂಟ್ ನಲ್ಲಿ ನನಗೆ ಜವಬ್ದಾರಿ ನೀಡುತ್ತಿಲ್ಲ. ಹಾಗೂ ವೈಯಕ್ತಿಕ ಕಾರಣ ನೀಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನದಿಗೆ ಜಿಗಿದಿದ್ದ ವಿಶ್ವನನ್ನ ಗಮಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ಶವದ ಶೋಧ ನಡೆಸಿದ್ರು. ಕತ್ತಲಾದ ಹಿನ್ನೆಲೆ ಶೋಧಕಾರ್ಯ ಸ್ಥಗಿತವಾಗಿದ್ದು ಬೆಳಗ್ಗೆ ಮತ್ತೆ ಶೋಧ ನಡೆಯಲಿದೆ. ಇನ್ನು ಘಟನಾ ಸ್ಥಳಕ್ಕೆ ಮುಂಡರಗಿ ಸಿಪಿಐ ಸುನೀಲ ಸವದಿ ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ.








