Raichur | ಮಕ್ಕಳ ಮುಂದೆಯೇ ತಂದೆಯ ಕೊಲೆ
ರಾಯಚೂರು : ನೀರಿನ ವಿಚಾರಕ್ಕೆ ಹಾಡು ಹಗಲೇ ಇಬ್ಬರು ಮಕ್ಕಳ ಮುಂದೆಯೇ ತಂದೆಯ ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
40 ವರ್ಷದ ಮಹಿಬೂಬ ಅಲಿ ಕೊಲೆಯಾದ ದುರ್ದೈವಿಯಾಗಿದ್ದಾರೆ.
ಸೈಯದ್ ಅಲಿ, ಮೊಹಮ್ಮದ್ ಅಮನ್ ಕೊಲೆ ಆರೋಪಿಗಳಾಗಿದ್ದಾರೆ.
ನಗರದ ವಾರ್ಡ್ ನಂಬರ್ 12ರಲ್ಲಿ ಈ ಘಟನೆ ನಡೆದಿದೆ.
ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾದ ಸೈಯದ್ ಅಲಿ, ಮೊಹಮ್ಮದ್ ಅಮನ್, ಮಹಿಬೂಬ ಅಲಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ನೀರಿನ ವಿಚಾರವಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸದರ ಬಜಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.