ಯೂಟ್ಯೂಬ್ , ಇನ್ಸ್ಟಾ , ಫೇಸ್ ಬುಕ್ ಪೇಜಸ್ ಹೀಗೆ ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಕಂಟೆಂಟ್ ಕ್ರಿಯೇಟರ್ ಗಳು ಸಂಪಾದನೆ ಮಾಡ್ತಾರೆ.. ಇದು ಒಂದು ರೀತಿ ಡಿಜಿಟಲ್ ಯುವಾಗಿದೆ.. ಯೂಟ್ಯೂಬ್ ನಿಂದಲೂ ಅನೇಕರು ಈಗಾಗಲೇ ಫೇಮಸ್ ಆಗಿ ಲಕ್ಷಲಕ್ಷ ಸಬ್ಸ್ ಸ್ಕ್ರೈಬರ್ ಗಳನ್ನ ಹೊಂದಿದ್ದಾರೆ.. ಅಂತೆಯೇ ಅನೇಕರು ಯೂಟ್ಯೂಬ್ ನಲ್ಲಿ ಫೇಮಸ್ ಆಗಲೂ ಚಂದಾದಾರರನ್ನ ಪಡೆಯಲು ಸ್ಟ್ರಗಲ್ ಮಾಡ್ತಿದ್ದಾರೆ..
ಆದ್ರೆ ಇಲ್ಲೊಬ್ಬ ತನ್ನ ಯೂಟ್ಯೂಬ್ ಚಾನೆಲ್ ಗೆ ಚಂದಾದಾರರ ಸಂಖ್ಯೆ ಕಡಿಮೆಯಾಗಿದೆ ಮತ್ತು ವಿಡಿಯೊ ನೋಡುಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬ ಕಾರಣದಿಂದಲೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.. ಇಂತಹ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ..
23 ವರ್ಷದ ವಿದ್ಯಾರ್ಥಿ ಗ್ವಾಲಿಯರ್ ನ ಐಐಐಟಿಎಂನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಹೈದರಾಬಾದ್ ನ ವಸತಿ ಕಟ್ಟಡವೊಂದರ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆತ್ ನೋಟ್ ಬರೆದಿಟ್ಟಿರುವ ಹುಡುಗ ಯೂಟ್ಯೂಬ್ ಚಾನೆಲ್ ವೀವರ್ಸ್ ಸಂಖ್ಯೆಯಲ್ಲಿ ಇಳಿಕೆಯಾಗಿರುವುದಕ್ಕೆ ಸಬ್ ಸ್ಕ್ರೈಬರ್ಸ್ ಕಡಿಮೆ ಇರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿರೋದಾಗಿ ವರದಿಯಾಗಿದೆ..
ಅಷ್ಟೇ ಅಲ್ದೇ ಭವಿಷ್ಯ ಮತ್ತು ಉದ್ಯೋಗದ ವಿಚಾರದಲ್ಲಿ ಪಾಲಕರು ಸರಿಯಾಗಿ ನಿರ್ದೇಶನ ಮಾಡುತ್ತಿಲ್ಲ ಎಂದು ವಿದ್ಯಾರ್ಥಿ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾನೆ ಎನ್ನಲಾಗಿದೆ.








