ದೆಹಲಿ, ಜೂನ್ 2 : ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ (ಕೆಪಿಕೆಬಿ) ಕ್ಯಾಂಟೀನ್ಗಳಲ್ಲಿ ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, ಇದೀಗ ಅಲ್ಲಿ 1000ಕ್ಕೂ ಹೆಚ್ಚು ವಿದೇಶಿ ಉತ್ಪನ್ನಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ ಮೈಕ್ರೋವೇವ್ ನಿಂದ ಹಿಡಿದು ಪಾದರಕ್ಷೆಯವರೆಗೆ ಎಲ್ಲಾ ವಿದೇಶಿ ಬ್ರಾಂಡ್ ವಸ್ತುಗಳನ್ನು ನಿಷೇಧಿಸಲಾಗಿದ್ದು, ಟಾಮಿ ಹಿಲ್ಫಿಗರ್ ಶರ್ಟ್ ನಂತಹ ಪ್ರತಿಷ್ಠಿತ ಬ್ರಾಂಡ್ ಶರ್ಟ್ ಸೇರಿದಂತೆ, 1000ಕ್ಕೂ ಹೆಚ್ಚು ವಿದೇಶಿ ಉತ್ಪನ್ನಗಳಿಗೆ ನಿರ್ಬಂಧ ಹೇರಲಾಗಿದೆ.
ಬಿಎಸ್’ಎಫ್, ಐಟಿಬಿಪಿ, ಅಸ್ಸಾಂ ರೈಫಲ್ಸ್ , ಎಸ್.ಎಸ್.ಬಿ, ಸಿಆರ್ಪಿಎಫ್, ಸಿಐಎಸ್.ಎಫ್, ಎನ್.ಎಸ್.ಜಿಯ 10 ಲಕ್ಷ ಸಿಬ್ಬಂದಿಗಳು ಮತ್ತು ಅವರ 50 ಲಕ್ಷ ಕುಟುಂಬ ಸದಸ್ಯರು ಕೇಂದ್ರೀಯ ಪೊಲೀಸ್ ಕ್ಯಾಂಟೀನ್ ಉತ್ಪನ್ನಗಳನ್ನು ಉಪಯೋಗಿಸುತ್ತಾರೆ. ದೇಶದಲ್ಲಿ ಜೂನ್ 1 ರಿಂದ ಅರೆ ಸೈನಿಕ ಕ್ಯಾಂಟೀನ್ ಗಳಲ್ಲಿ ಕೂಡ ಸ್ವದೇಶಿ ಉತ್ಪನ್ನಗಳು ಮಾತ್ರ ದೊರೆಯಲಿದ್ದು, ವಿದೇಶಿ ಕಂಪನಿಗಳ ಉತ್ಪನ್ನಗಳನ್ನು ನಿಷೇಧಿಸಲಾಗಿದೆ








