RGV..! ರಾಮ್ ಗೋಪಾಲ್ ವರ್ಮಾ.. ಭಾರತೀಯ ಚಿತ್ರರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ನಿರ್ದೇಶಕ. ಹಾಗೇ ಸುಖಾಸುಮ್ಮನೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ.
ಆ ವಿಚಾರ ಈ ವಿಚಾರ ಎಂಬ ಬೇದವಿಲ್ಲದೇ ಎಲ್ಲಾ ವಿಷಯಗಳ ಬಗ್ಗೆ ಟ್ವಿಟ್ಟರ್ ನಲ್ಲಿ ವ್ಯಂಗ್ಯಭರಿತವಾಗಿ ಟ್ವೀಟ್ ಮಾಡುವ ಆಗ್ಗಿಂದಾಗೆ ಸದ್ದು ಮಾಡುತ್ತಲೇ ಇರುತ್ತಾರೆ.
ಶಿವ ಸಿನಿಮಾದ ಮೂಲಕ ಟಾಲಿವುಡ್ ನಲ್ಲಿ ನಿರ್ದೇಶಕರ ಕ್ಯಾಪ್ ತೊಟ್ಟ ರಾಮ್ ಗೋಪಾಲ್ ವರ್ಮಾ ಬಳಿಕ ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಆಕ್ಷನ್ ಕಟ್ ಹೇಳುವಷ್ಟು ಬೆಳೆದಿದ್ದು ಈಗ ಇತಿಹಾಸ.ಮತ್ತೆ ಇದೀಗ ಸೌತ್ ಕಡೆ ಮುಖ ಮಾಡಿರುವ ರಾಮ್ ಗೋಪಾಲ್ ವರ್ಮಾ ತಮ್ಮದೇ ಅಭಿರುಚಿಯ ಸಿನಿಮಾಗಳನ್ನು ಮಾಡುತ್ತಾ ಹೊರಟ್ಟಿದ್ದಾರೆ.
ಇದೀಗ ರಾಮ್ ಗೋಪಾಲ್ ವರ್ಮಾ ಅವರು ಕಂಗನಾ ರಣೌತ್ ನಟನೆಯ ಇಂದಿರಾ ಗಾಂಧಿ ಬಯೋಪಿಕ್ ‘ಎಮರ್ಜೆನ್ಸಿ’ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ…
ಕಂಗನಾ ಕುರಿತು RGV ಮಾತನಾಡಿದ್ದು ಅವರ ಹೇಳಿಕೆ ವೈರಲ್ ಆಗ್ತಿದೆ.. ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ ಅಂತಾ ಟ್ವೀಟ್ ಮಾಡಿದ್ದಾರೆ.
1984ರಲ್ಲಿ ಇಂದಿರಾ ಗಾಂಧಿ ನೀಡಿದ ವಿಶೇಷ ವಿಡಿಯೋ ಸಂದರ್ಶನದ ತುಣುಕನ್ನು RGV ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಕಾಲದಲ್ಲಿ ಪಂಜಾಬ್ ನಲ್ಲಿ ಇದ್ದ ಪರಿಸ್ಥಿತಿಯ ಬಗ್ಗೆ ಇಂದಿರಾ ಗಾಂಧಿ ಮಾತನಾಡಿದ್ದರು. ಈ ಸಂದರ್ಶನವನ್ನು ಕಂಡು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ ವರ್ಮಾ.
ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ಈ ವಿಡಿಯೋದಲ್ಲಿ ಇಂದಿರಾ ಗಾಂಧಿ ಅವರು ಕಂಗನಾ ರೀತಿ ಮಾಡ್ತಿದ್ದಾರೆ ಎಂದು ರಾಮ್ ಗೋಪಾಲ್ ವರ್ಮಾ ಕ್ಯಾಪ್ಷನ್ ನೀಡಿ, ಮೆಚ್ಚುಗೆ ತಿಳಿಸಿದ್ದಾರೆ.
https://twitter.com/RGVzoomin/status/1550863572720201730?ref_src=twsrc%5Etfw%7Ctwcamp%5Etweetembed%7Ctwterm%5E1550863572720201730%7Ctwgr%5E%7Ctwcon%5Es1_&ref_url=https%3A%2F%2Fpublictv.in%2Frgv-says-indira-gandhi-is-acting-like-kangana-ranaut-in-this-1984-interview%2F








