Covid19 Report : India : ದೈನಂದಿನ ಕೇಸ್ ಗಳ ಸಂಖ್ಯೆಯಲ್ಲಿ ಇಳಿಕೆ
ದೇಶದಲ್ಲಿ ದಿನೇ ದಿನೇ ಕೋವಿಡ್ ಆತಂಕ ಹೆಚ್ಚಾಗ್ತಿದ್ದು, ಭಾನುವಾರ 20 ಸಾವಿರಕ್ಕೂ ಅಧಿಕ ದೈನಂದಿನ ಕೇಸ್ ಗಳು ಪತ್ತೆಯಾಗಿತ್ತು.. ಆದರೆ ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 16,866 ಕೋವಿಡ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ..
ಇದೇ ಅವಧಿಯಲ್ಲಿ 41 ಮಂದಿ ಮೃತಪಟ್ಟಿದ್ದಾರೆ.. ಕಳೆದ 24 ಗಂಟೆಯಲ್ಲಿ 18,148 ಸೋಂಕಿತರು ಗುಣಮುಖರಾಗಿದ್ದಾರೆ.. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,50,877ಕ್ಕೆ ತಲುಪಿದೆ.
ಇನ್ನೂ ದೇಶದಲ್ಲಿ ಈವರೆಗೆ 4,39,05,621 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.. ಒಟ್ಟು 5,26,074 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ..








