ಐಶ್ವರ್ಯಾ ರಜನಿಕಾಂತ್ ಮತ್ತು ಧನುಷ್ ಮದುವೆಯಾಗಿ 18 ವರ್ಷಗಳಾಗಿತ್ತು. ಜನವರಿ 17 ರಂದು ದಂಪತಿಗಳು ಡಿವೋರ್ಸ್ ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ಇಬ್ಬರೂ ಡಿವೋರ್ಸ್ ಪಡೆದು ತಮ್ಮ ತಮ್ಮ ಜೀವನದಲ್ಲಿ ಬ್ಯುಸಿಯಿದ್ದಾರೆ,.. ಐಶ್ವರ್ಯಾ ಅವರು ನಿರ್ದೇಶನಕ್ಕೆ ಮರಳಿದ್ರೆ , ಧನುಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..
ಆದ್ರೆ ಅನ್ಯೋನ್ಯವಾಗಿದ್ದ ಜೋಡಿ ನಡುವೆ ಆಗಿದ್ದೇನು..?? ಅನ್ನೋ ಪ್ರಶ್ನೆ ಈವರೆಗೂ ಅಭಿಮಾನಿಗಳನ್ನ ಕಾಡುತ್ತಲೇ ಇದ್ದು ನಾನಾ ರೀತಿಯ ರೂಮರ್ ಗಳು ಆಗಾಗ ಹರಿದಾಡುತ್ತಲೇ ಇರುತ್ತೆ.. ಇದೀಗ ಸುತ್ತಿ ಬಳಸಿ ಇವರಿಬ್ಬರ ಸಂಬಂಧ ಹಾಳು ಮಾಡಿದ ಕಳಂಕ ಬಾಲಿವುಡ್ ನ ಯುವ ನಟಿ ಸಾರಾ ಅಲಿಖಾನ್ ಗೆ ಸುತ್ತಿಕೊಂಡಿದ್ದು ಟ್ರೋಲರ್ಸ್ ಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಾಯಿದ್ದಾರೆ..
ಬಾಲಿವುಡ್‌ನ ಅತ್ರಂಗಿರೆ ಚಿತ್ರದಲ್ಲಿ ಸಾರಾ , ಧನುಷ್ ಮತ್ತು ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಧನುಷ್ ಮತ್ತು ಸಾರಾಗೆ ಗೆಳೆತನ ಶುರುವಾಗಿತ್ತು. ಇದೀಗ ಇವರಿಬ್ಬರ ಓಡಾಟ ಹೆಚ್ಚಾಗಿದೆ ಎನ್ನಲಾಗ್ತಿದೆ.. ಅಲ್ಲದೇ ಐಶ್ವರ್ಯ ಮತ್ತು ಧನುಷ್ ಬೇರೆಯಾಗಲು ಸಾರಾ ಅಲಿ ಖಾನ್ ಕಾರಣ ಅಂತ ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ..








