ರಾಜಸ್ಥಾನದ ಕರೌಲಿ ಜಿಲ್ಲೆಯ ಮಸಲ್ಪುರದ ರೇಷ್ಮಾ ಎಂಬ ಮಹಿಳೆ ಒಂದೇ ಭಾರಿ 5 ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅಶ್ಕ್ ಅಲಿ ಹಾಗೂ ರೇಷ್ಮಾ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಮದುವೆಯಾಗಿ ವರ್ಷಗಳು ಉರುಳಿದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಮಗುವಿಗಾಗಿ ಹರಕೆ ಹೊತ್ತು ಅನೇಕ ಕಡೆ ಪೂಜೆ ಕೂಡ ಸಲ್ಲಿಸಿದ್ದರು. 6 ವರ್ಷ ಕಳೆದು 7 ನೇ ವರ್ಷದಲ್ಲಿ ದೇವರು ಮಗು ಕರುಣಿಸಿದ್ದಾನೆ ಒಂದಲ್ಲ 5 ಮಗುವಿಗೆ ದಂಪತಿಗಳು ಪೋಷಕರಾಗಿದ್ದಾರೆ.
ರೇಷ್ಮಾ ಕರೌಲಿಯ ಖಾಸಗಿ ಆಸ್ಪತ್ರೆಯಲ್ಲಿ 5 ಮಕ್ಕಳಿಗೆ ಸೋಮವಾರ ಜನ್ಮ ನೀಡಿದ್ದಾರೆ. ಒಂದೇ ಬಾರಿಗೆ ಐದು ಮಕ್ಕಳು ಜನಿಸಿದ್ದು ಆಸ್ಪತ್ರೆ ಸಿಬ್ಬಂದಿಗೂ ಆಶ್ಚರ್ಯಗೊಂಡಿದ್ದಾರೆ. ತಕ್ಷಣವೇ ಈ ಸುದ್ದಿ ಹರಡಿ ಬಂದು ಮಿತ್ರರು ಆಸ್ಪತ್ರೆಯಲ್ಲಿದ್ದವರು ಮಕ್ಕಳನ್ನ ನೋಡಲು ಆಸ್ಪತ್ರೆಗೆ ದಾವಿಸಿದ್ದಾರೆ.
ರೇಷ್ಮಾ ಇಬ್ಬರು ಗಂಡು ಮತ್ತು 3 ಹೆಣ್ಣು ಮಕ್ಕಳಿಗೆ 7ನೇ ತಿಂಗಳಲ್ಲಿ ಜನ್ಮ ನೀಡಿದ್ದಾರೆ. ಹೆರಿಗೆ ನಂತರ ತಾಯಿಯು ಕೂಡ ಆರೋಗ್ಯವಾಗಿದ್ದಾರೆ. ಐವರು ಮಕ್ಕಳು 300 ರಿಂದ 660 ಗ್ರಾಂ ತೂಕ ಹೊಂದಿದ್ದು, ತೀವ್ರ ನಿಗಾ ಅಗತ್ಯದ ಕಾರಣ ಕಂದಮ್ಮಗಳನ್ನು ಜೈಪುರಕ್ಕೆ ಕಳುಹಿಸಲಾಗಿದೆ. ಆದಾಗ್ಯೂ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಆಶಾ ಮೀನಾ ತಿಳಿಸಿದ್ದಾರೆ.








