28,732ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್…
ರಕ್ಷಣಾ ಉಪಕರಣಗಳ ಖರೀದಿ, ಶಸ್ತ್ರಾಸ್ತ್ರಗಳ ಖರೀದಿಗೆ 28,732 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಅನುಮೋದನೆ ನೀಡಿದೆ.
ಗುಂಡು ನಿರೋಧಕ ಜಾಕೆಟ್ ಗಳು, ಸ್ವಾರ್ಮ್ ಡ್ರೋನ್ (ಸಮೂಹ ಡ್ರೋನ್) ಗಳು, ದೇಶೀಯ ವಿನ್ಯಾಸ, ಅಭಿವೃದ್ಧಿ, ಹಾಗೂ ಉತ್ಪಾದನೆ ಯೋಜನೆಯಡಿಯಲ್ಲಿ ಕಾರ್ಬೈನ್ಸ್ ಗಳ ಖರೀದಿಗೆ ಅನುಮೋದನೆ ದೊರೆತಿದೆ.
2020ರ ಮೇಯಿಂದ ಚೀನಾದೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಸೇರಿ ಭಾರತದ ಗಡಿಯಲ್ಲಿ ಎರಡೂ ದೇಶಗಳ ನಡುವೆ ಬಿಕ್ಕಟ್ಟು ಮೂಡಿದೆ. ಹೀಗಾಗಿ ಎಲ್‌ಎಸಿಯಲ್ಲಿ ನಿಯೋಜನೆಗೊಂಡಿರುವ ಮುಂಚೂಣಿ ಸೈನಿಕರಿಗಾಗಿ ಕ್ಲೋಸ್ ಕ್ವಾರ್ಟರ್ ಕಾರ್ಬೈನ್‌ಗಳನ್ನು ಖರೀದಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ದೇಶದ ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ, ಬೈ ಇಂಡಿಯನ್-ಐಡಿಡಿಎಂ ವರ್ಗದ ಅಡಿಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್‌ಗಾಗಿ 14 ವೇಗದ ಗಸ್ತು ನೌಕೆಗಳ ಎಫ್‌ಪಿವಿಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ಡಿಎಸಿ ಅನುಮೋದಿಸಿದೆ.








