Madhya Pradesh –ವಿದ್ಯುತ್ ಬಿಲ್ ನೋಡಿ ಅಸ್ವಸ್ಥಗೊಂಡ ವೃದ್ಧ, ಮೊತ್ತ ಕೇಳಿದ್ರೆ ನಿಮಗೂ ಆಘಾತ
ವಿದ್ಯುತ್ ಇಲಾಖೆ ಕರೆಂಟ್ ಗಿಂತ ಹೆಚ್ಚಾಗಿ ಕರೆಂಟ್ ಬಿಲ್ ಮೂಲಕ ಹೆಚ್ಚು ಶಾಕ್ ಕೊಡುತ್ತಿದೆ. ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿಯೊಬ್ಬರಿಗೆ ವಿದ್ಯುತ್ ಇಲಾಖೆ ನೀಡಿದ ಬಿಲ್ ನೋಡಿದ್ರೆ ಎದೆಹೊಡೆದುಕೊಳ್ಳುವುದು ಖಚಿತ
ಗ್ವಾಲಿಯರ್ ನಗರದ ಶಿವ್ ವಿಹಾರ್ ನಿವಾಸಿ ಗುಪ್ತಾ ಕುಟುಂಬದ ಹಿರಿಯೊಬ್ಬರು ವಿದ್ಯುತ್ ಬಿಲ್ ನೋಡಿ ಅಸ್ವಸ್ಥಗೊಂಡಿದ್ದಾರೆ. ಸಾಮಾನ್ಯ ಕುಟುಂಬಕ್ಕೆ 3,419 ಕೋಟಿ ರೂ ಬಿಲ್ ನೀಡಿದೆ ಸರ್ಕಾರಿ ಸೌಮ್ಯದ ವಿದ್ಯುತ್ ಕಂಪನಿ.
ಜುಲೈನಲ್ಲಿ ಮನೆ ಬಳಕೆಗೆ ಉಪಯೋಗಿಸಿದ ವಿದ್ಯುತ್‌ಗೆ ಬಂದ ಬೃಹತ್ ಮೊತ್ತದ ಬಿಲ್ ಕಂಡು ತಮ್ಮ ತಂದೆ ಆಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪುತ್ರ ಸಂಜೀವ್ ಕಂಕಾನೆ ತಿಳಿಸಿದ್ದಾರೆ. ವಿದ್ಯುತ್ ಇಲಾಖೆ ಎಸಗಿದ ನಿರ್ಲಕ್ಷ್ಯದ ಸುದ್ದಿ ವೈರಲ್ ಆಗಿದೆ.
ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆಯೇ ಸ್ಪಷ್ಟೀಕರಣ ನೀಡಿರುವ ಮಧ್ಯಪ್ರದೇಶ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪೆನಿ ಇದೊಂದು ‘ಮಾನವ ಸಹಜ ದೋಷ’ದಿಂದ ಉಂಟಾದ ಸಮಸ್ಯೆ ಎಂದು ಹೇಳಿ ವಿದ್ಯುತ್ ಬಿಲ್ ಮೊತ್ತವನ್ನು ಸರಿಪಡಿಸಿದೆ. ಅಂದಹಾಗೆ, ಈಗ ಗುಪ್ತಾ ಕುಟುಂಬ ಕಟ್ಟಬೇಕಿರುವುದು 1,300 ರೂಪಾಯಿಗಳನ್ನ ಮಾತ್ರ…








