Ragging ನ ಒಂದು ಕರಾಳ ಮುಖ ಬಯಲು : ದಿಂಬಿನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ ಸೀನಿಯರ್ಸ್
ಮಧ್ಯಪ್ರದೇಶದ ಅತಿದೊಡ್ಡ ರಾಜ್ಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀನಿಯರ್ ಎಂಬಿಬಿಎಸ್ ವಿದ್ಯಾರ್ಥಿಗಳು ಜೂನಿಯರ್ ಗಳ ಮೇಲೆ ಅಸಭ್ಯ ರ್ಯಾಗಿಂಗ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ..
ನಿಂದನೀಯ ಕೃತ್ಯಗಳನ್ನು ಮಾಡಲು ಒತ್ತಾಯಿಸುವುದು ಸೇರಿದಂತೆ ರ್ಯಾಗಿಂಗ್ ಆರೋಪವನ್ನ ಸೀನಿಯರ್ ವಿದ್ಯಾರ್ಥಿಗಳ ಮೇಲೆ ಹೊರಿಸಲಾಗಿದೆ. ಆದ್ರೆ ರ್ಯಾಗಿಂಗ್ ಮಾಡಿದ ಹಿರಿಯ ವಿದ್ಯಾರ್ಥಿಗಳ ಗುರುತು ಬಹಿರಂಗಗೊಂಡಿಲ್ಲ.
ಇಂದೋರ್ ನ ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ರ್ಯಾಗಿಂಗ್ ಗೆ ಒಳಪಟ್ಟ ಜ್ಯೂನಿಯರ್ ವಿದ್ಯಾರ್ಥಿಗಳು ಈ ಬಗ್ಗೆ ವಿಶ್ವವಿದ್ಯಾನಿಲಯ ಯುಜಿಸಿ, ಆಂಟಿ ರ್ಯಾಗಿಂಗ್ ಸಹಾಯವಾಣಿಗೆ ಕರೆ ಮಾಡಿ ತಮ್ಮ ಭಯಾನಕ ಅನುಭವವನ್ನ ಹೇಳಿಕೊಂಡಿದ್ಧಾರೆ. ಹಿರಿಯ ಎಂಬಿಬಿಎಸ್ ವಿದ್ಯಾರ್ಥಿಗಳ ಫ್ಲ್ಯಾಟ್ ಗಳಲ್ಲಿ ದಿಂಬುಗಳು ಮತ್ತು ಬ್ಯಾಚ್ ಮೇಟ್‌ಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ನಟಿಸುವಂತೆ ಮಾಡಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರಾಣಹಾನಿ ಹಾಗೂ ಮಾನಸಿಕವಾಗಿ ಹಾನಿಯುಂಟುಮಾಡುವ ರಾಗಿಂಗ್ ಸಹಿಸಲಾಗದು.. ಕಾಲೇಜಿನ ರ್ಯಾಗಿಂಗ್ ವಿರೋಧಿ ಸಮಿತಿಯು ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲು ನಿರ್ಧರಿಸಿದೆ.
ಯುಜಿಸಿಯ ರ್ಯಾಗಿಂಗ್ ವಿರೋಧಿ ಸಹಾಯವಾಣಿಗೆ ಜೂನಿಯರ್ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ ದೂರಿನಲ್ಲಿ, ಹಿರಿಯರು ಹೊಸ ವಿದ್ಯಾರ್ಥಿಗಳನ್ನು ಮಹಿಳಾ ಬ್ಯಾಚ್‌ಮೇಟ್‌ನ ಹೆಸರನ್ನು ಆಯ್ಕೆ ಮಾಡುವಂತೆ ಮತ್ತು ಆಕೆಯ ಮೇಲೆ ನಿಂದನೀಯ ಹೇಳಿಕೆಗಳನ್ನು ನೀಡುವಂತಹ ನಿಂದನೀಯ ಮತ್ತು ಅಸಭ್ಯ ಕೃತ್ಯಗಳನ್ನು ನಡೆಸುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಜೂನಿಯರ್ ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ದೇ ಸೀನಿಯರ್ಸ್ ಸೇಡು ತೀರಿಸಿಕೊಳ್ಬಹುದು ಎಂಬ ಭಯದಲ್ಲಿ ಅವರುಗಳ ಹೆಸರನ್ನ ಬಹಿರಂಗ ಪಡಿಸಲು ರಾಗಿಂಗ್ ಗೆ ಒಳಗಾದ ಜ್ಯೂನಿಯರ್ಸ್ ಹೆದರುತ್ತಿದ್ದಾರೆ ಎನ್ನಲಾಗಿದೆ..
ಯುಜಿಸಿಗೆ ನೀಡಿದ ವಿವರವಾದ ದೂರಿನಲ್ಲಿ ವಾಟ್ಸಾಪ್ ಚಾಟ್ ಸೇರಿದಂತೆ ಕಿರಿಯ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮತ್ತು ಚಿತ್ರಹಿಂಸೆಗೆ ಸಂಬಂಧಿಸಿದ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಗಳ ರೂಪದಲ್ಲಿ ಪುರಾವೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








