ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರದಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಊರಿಗೆ ತೆರಳಲಾಗದೇ ಬೆಳಗಾವಿಯಲ್ಲೇ ಸಿಕ್ಕಿ ಬಿದ್ದಿದ್ದಾರೆ. ತಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಜಿಲ್ಲಾಡಳಿತವನ್ನು ಕೋರುತ್ತಿದ್ದಾರೆ.
ಲಾಕ್ಡೌನ್ನಿಂದ ವಲಸೆ ಕಾರ್ಮಿಕರು ಪಡುತ್ತಿರುವ ಕಷ್ಟ ಒಂದೆರಡಲ್ಲ. ಊರಿಗೆ ತೆರಳಲು ಇವರು ಪಡುತ್ತಿರುವ ಕಷ್ಟ ಮರುಕ ಹುಟ್ಟಿಸುತ್ತದೆ. ಬೇರೆ ಬೇರೆ ಕಾರಣಗಳಿಂದ ಬೆಳಗಾವಿಗೆ ಬಂದು ಇಲ್ಲಿ ಲಾಕ್ಡೌನ್ನಲ್ಲಿ ಸಿಕ್ಕಿರುವ ಕಾರ್ಮಿಕರು ಟ್ರೇನ್ ದಾರಿ ಕಾಯುತ್ತ ಬೆಳಗಾವಿಯಲ್ಲೇ ನೆಲೆಸಿದ್ದಾರೆ. ತಾವು ಊರಿಗೆ ತೆರಳಬಹುದು, ಸರ್ಕಾರ ನಮಗೆ ನೆರವು ನೀಡಬಹುದು ಎಂದು ಕಾಯುತ್ತ ಕುಳಿತಿದ್ದಾರೆ. ಸೇವಾ ಸಿಂಧು ಆನ್ಲೈನ್ನಲ್ಲಿ ನೋಂದಣಿ ಮಾಡಿಸಿದರೂ ಹಲವರಿಗೆ ಪ್ರಯಾಣಕ್ಕೆ ಅವಕಾಶ ಸಿಕ್ಕಿಲ್ಲ. ಅವಕಾಶ ಸಿಕ್ಕವರಿಗೆ ಟ್ರೇನ್ ವ್ಯವಸ್ಥೆ ಇಲ್ಲ. ಈ ಅವ್ಯವಸ್ಥೆ ಕಾರ್ಮಿಕರನ್ನು ಕಂಗೆಡಿಸಿ
ಈ ಕುರಿತು ಬಿಹಾರದ ಕಾರ್ಮಿಕ ಮಾತನಾಡಿ, ಸೇವಾ ಸಿಂಧು ಆನ್ಲೈನ್ನಲ್ಲಿ ಬುಕ್ ಮಾಡಿದ್ದೆ. ಆದರೆ ಅವರು ಕಳುಹಿಸಿದ್ದ ಟ್ರೇನ್ ಸಿಗಲಿಲ್ಲ. ಜೂನ್ನಲ್ಲಿ ಟ್ರೇನ್ ಆರಂಭವಾಗುತ್ತವೆ ಎಂದು ಕಾಯುತ್ತ ಇಲ್ಲೇ ಇದ್ದೇವೆ ಎಂದರು.
ಗಾಡಿ ದುರಸ್ತಿ ಮಾಡುತ್ತ ನಿಂತು ಲಾಕ್ಡೌನ್ನಲ್ಲಿ ಸಿಲುಕಿಕೊಂಡಿರುವ ಉತ್ತರ ಪ್ರದೇಶದ ಸಮೀರ್ ಮಾತನಾಡಿ, ನಮಗೆ ಕಷ್ಟವಾಗುತ್ತಿದೆ. ಊರಿಗೆ ಹೋಗಲು ಸರ್ಕಾರ ವ್ಯವಸ್ಥೆ ಮಾಡುತ್ತದೆ ಎಂದು ಕಾಯುತ್ತಿದ್ದೇವೆ. ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಆದರೆ ಇಲ್ಲಿಯವರೆಗೂ ನಮಗೆ ಊರಿಗೆ ತೆರಳಲು ವ್ಯವಸ್ಥೆ ಆಗಿಲ್ಲ ಎಂದರು.
ಒಟ್ಟಿನಲ್ಲಿ ಊರಿಗೆ ತೆರಳಲು ವಲಸೆ ಕಾರ್ಮಿಕರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಅವರು ಲಾಕ್ಡೌನ್ನಲ್ಲಿ ಸಿಕ್ಕು ಅನುಭವಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಜಿಲ್ಲಾಡಳಿತ, ಸರ್ಕಾರ ಇವರಿಗೆ ಯಾವ ವ್ಯವಸ್ಥೆ ಮಾಡುತ್ತದೆ ಎಂಬುದೇ ಈಗಿನ ಪ್ರಶ್ನೆ.








