Siddaramaiah ನವರೇ, ಹತ್ಯೆಯಲ್ಲೂ ಜಾತಿ ಹುಡುಕುವ ಅಲ್ಪ ಮಾನಸಿತೆ ಏಕೆ
ಬೆಂಗಳೂರು : ಸಿದ್ದರಾಮಯ್ಯನವರೇ, ಹತ್ಯೆಯಲ್ಲೂ ಜಾತಿ ಹುಡುಕುವ ಅಲ್ಪ ಮಾನಸಿತೆ ಏಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಕರಾವಳಿ ಭಾಗದಲ್ಲಿ ಸರಣಿ ಕೊಲೆ ಹಿನ್ನೆಲೆಯಲ್ಲಿ ಯುವಕರಿಗೆ ಸಿದ್ದರಾಮಯ್ಯ ಪತ್ರ ಮೂಲಕ ಕಿವಿಮಾತು ಹೇಳಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದೆ.
ಬಿಜೆಪಿ ಟ್ವೀಟ್ ನಲ್ಲಿ…
ಸಿದ್ದರಾಮಯ್ಯ ಅವರೇ ಉರಿಯುವ ಮನೆಯಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಬೇಡ.ಈ ರಾಜ್ಯದಲ್ಲಿ ಕೋಮು ಸೌಹಾರ್ದ ಕದಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನೀತಿಯೇ ಕಾರಣ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಕಟುಕರ ಮನೆಯ ಗಿಣಿಯಂತೆ ಮಾತನಾಡಿರುವುದನ್ನು ನಾಡು ಕಂಡಿದೆ.
ಸಿದ್ದರಾಮಯ್ಯ ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದಾಗಲೇ ಶರತ್ ಮಡಿವಾಳ ಹಾಗೂ ಉತ್ತರ ಕನ್ನಡ ಪ್ರವಾಸದಲ್ಲಿದ್ದಾಗ ಪರೇಶ್ ಮೇಸ್ತಾ ಹತ್ಯೆಯಾಗಿತ್ತು.ಆದರೆ ಇವರು ಹಿಂದುಗಳು ಎಂಬ ಕಾರಣಕ್ಕೆ ಸಂತಾಪ ಸೂಚಿಸಲು ಮೃತರ ಮನೆಗೆ ತೆರಳಲಿಲ್ಲ.ಆದರೆ ಅದೇ ಸಿದ್ದರಾಮಯ್ಯ ಈಗ ಧುತ್ತನೇ ಎದ್ದು ಬುರುಡೆ ಬಿಡಲು ಆರಂಭಿಸಿದ್ದಾರೆ.
ಹಿಂದು ವಿರೋಧಿ ಸಿದ್ದರಾಮಯ್ಯ ಅವರೇ,
ಹಿಂದುಗಳ ಕೊಲೆಯಾದಾಗ ಎಫ್ಐಆರ್ ದಾಖಲಿಸಿಕೊಳ್ಳಲೂ ಎರಡೆರಡು ದಿನ ಸತಾಯಿಸಿದ್ದು ಮರೆತು ಹೋಯ್ತೇ?#ಸುಳ್‌ಸಿದ್ರಾಮಯ್ಯ
— BJP Karnataka (@BJP4Karnataka) July 30, 2022
ಹಿಂದು ವಿರೋಧಿ ಸಿದ್ದರಾಮಯ್ಯ ಅವರೇ,ಹಿಂದುಗಳ ಕೊಲೆಯಾದಾಗ ಎಫ್ಐಆರ್ ದಾಖಲಿಸಿಕೊಳ್ಳಲೂ ಎರಡೆರಡು ದಿನ ಸತಾಯಿಸಿದ್ದು ಮರೆತು ಹೋಯ್ತೇ?
ಸಿದ್ದರಾಮಯ್ಯ ಅವರ ಹೇಯ ಮನಃಸ್ಥಿತಿಗೆ ನಾಚಿಕೆಯಾಗಬೇಕು.ಅಧಿಕಾರದಲ್ಲಿ ಇದ್ದಾಗ ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿ ಈಗ ಶಾಂತಿ ಪತ್ರ ಬರೆದೇನು ಪ್ರಯೋಜನ?ಹಿಂದೂ ಯುವಕರ ಸಾಲು ಸಾಲು ಕೊಲೆಯಾದಾಗ ಕೈಕಟ್ಟಿ ಕುಳಿತಿರಿ, ನಿಮ್ಮದೇ ಲೆಕ್ಕದ ಪ್ರಕಾರ 12 ಹಿಂದೂಗಳ ರಕ್ತ ಹರಿಯುವವರೆಗೆ ನೀವು ಮಾಡಿದ್ದೇನು?
ನನ್ನ ವಿರುದ್ಧ ಅಪಪ್ರಚಾರ ನಡೆಸಿದರು ಎಂದು ಸಹಾನುಭೂತಿಗಿಟ್ಟಿಸಲು ಯತ್ನಿಸುವ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಧರ್ಮ ಹಾಗೂ ಜಾತಿ ವಿಭಜನೆ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದರು. ಒಂದೆಡೆ ವೀರಶೈವ-ಲಿಂಗಾಯಿತ ಧರ್ಮ ವಿಭಜನೆಗೆ ಕೈ ಹಾಕಿ ಇನ್ನೊಂದೆಡೆ ಹಿಂದೂಗಳ ಕೊಲೆಗೆ ಕತ್ತಿಕೊಟ್ಟಿದ್ದೇ ಸಿದ್ದರಾಮಯ್ಯ ಸಾಧನೆ.
ನನ್ನ ವಿರುದ್ಧ ಅಪಪ್ರಚಾರ ನಡೆಸಿದರು ಎಂದು ಸಹಾನುಭೂತಿಗಿಟ್ಟಿಸಲು ಯತ್ನಿಸುವ @siddaramaiah ಅಧಿಕಾರದಲ್ಲಿದ್ದಾಗ ಧರ್ಮ ಹಾಗೂ ಜಾತಿ ವಿಭಜನೆ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದರು.
ಒಂದೆಡೆ ವೀರಶೈವ-ಲಿಂಗಾಯಿತ ಧರ್ಮ ವಿಭಜನೆಗೆ ಕೈ ಹಾಕಿ ಇನ್ನೊಂದೆಡೆ ಹಿಂದೂಗಳ ಕೊಲೆಗೆ ಕತ್ತಿಕೊಟ್ಟಿದ್ದೇ ಸಿದ್ದರಾಮಯ್ಯ ಸಾಧನೆ.#ಸುಳ್‌ಸಿದ್ರಾಮಯ್ಯ
— BJP Karnataka (@BJP4Karnataka) July 30, 2022
ಸಿದ್ದರಾಮಯ್ಯ ಪ್ರಕಟಿಸಿದ ಪುಸ್ತಕದಲ್ಲಿ ಹತ್ಯೆಗೆ ಕಾರಣ ಎಂದು ನಮೂದಿಸಿ ಹತ್ಯೆಯ ವಿವರ ಪ್ರಕಟಿಸಿದ್ದಾರೆ. ಆದರೆ ಯೋಗೇಶ್ ಗೌಡ ಹತ್ಯೆಗೆ ಮಾತ್ರ ಜಮೀನು ವ್ಯಾಜ್ಯದಿಂದ ಮೃತಪಟ್ಟರು ಎಂದು ಬರೆದಿದ್ದಾರೆ, ಎಂತಹಾ ಸುಳ್ಳು!ಅಂದ ಹಾಗೆ ಆ ಕೊಲೆ ಆರೋಪಿ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ಎಂದು ಏಕೆ ನಮೂದಿಸಿಲ್ಲ?
ಸಿದ್ದರಾಮಯ್ಯ ಪ್ರಕಟಿಸಿರುವ ಪುಸ್ತಕದಲ್ಲಿ ಹತ್ಯೆಗೆ ಕಾರಣ ನಮೂದಿಸದೆ, ಹತ್ಯೆ ಮಾಡಿದವರು ಯಾರು ಎಂಬುದು ನಮೂದಿಸಲಾಗಿದೆ. ತಮ್ಮದೇ ಪಕ್ಷದ ನಾಯಕ ವಿನಯ್ ಕುಲಕರ್ಣಿ ಹೆಸರನ್ನು ಮುಚ್ಚಿಡಲು ಸಿದ್ದರಾಮಯ್ಯ ಈ ತಂತ್ರ ಹೆಣೆದಿದ್ದಾರೆ.ಅಲ್ಲದೆ, ಹತ್ಯೆ ಮಾಡಿದವರ ಧರ್ಮದ ವಿವರ ನೀಡಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ.
ದಾನಮ್ಮಳ ಹತ್ಯೆ ಮಾಡಿದವರು ಮೇಲ್ಜಾತಿಯವರು ಎಂದು ಹೇಳಿರುವ ಸಿದ್ದರಾಮಯ್ಯ, ಯೋಗೇಶ್ ಗೌಡ ಹತ್ಯೆ ಮಾಡಿದವರು ಯಾರು ಎಂದು ಏಕೆ ಹೇಳಲಿಲ್ಲ? ಕೊಲೆ ಆರೋಪಿ ಅವರದೇ ಪಕ್ಷದ ವಿನಯ್ ಕುಲಕರ್ಣಿ ಎಂಬುದು ಎಲ್ಲರಿಗೂ ತಿಳಿದಿದೆ. ಸಿದ್ದರಾಮಯ್ಯನವರೇ, ಹತ್ಯೆಯಲ್ಲೂ ಜಾತಿ ಹುಡುಕುವ ಅಲ್ಪ ಮಾನಸಿತೆ ಏಕೆ ಎಂದು ಬಿಜೆಪಿ ಕುಟುಕಿದೆ.








