ABVP Protest | ನನ್ನ ವಿರುದ್ಧ ಸಿಟ್ಟಲ್ಲ ಎಂದ ಗೃಹಸಚಿವ
ಶಿವಮೊಗ್ಗ : ಬೆಂಗಳೂರಿನ ಗೃಹ ಸಚಿವರ ನಿವಾಸದ ಮುಂದೆ ಎಬಿವಿಪಿ ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಗ ಜ್ಞಾನೇಂದ್ರ ಅದು ನನ್ನ ವಿರುದ್ಧ ಸಿಟ್ಟಲ್ಲ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಅದು ನನ್ನ ವಿರುದ್ಧ ಸಿಟ್ಟಲ್ಲ. ಈ ರೀತಿ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ ಅಷ್ಟೇ.
ಬಿಜೆಪಿ ಕಾರ್ಯಕರ್ತರನ್ನು ಕಳೆದುಕೊಂಡ ನೋವು ಇರುತ್ತದೆ. ಆರೋಪಿಗಳನ್ನು ಬಂಧಿಸಿ, ಶಿಕ್ಷಿಸಿ ಎಂದು ಆಗ್ರಹಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆ ಕೊಟ್ಟಿದ್ದರು. ಈಗಾಗಲೇ ದುಡುಕಿನ ಕ್ರಮ ಕೈಗೊಂಡಿದ್ದೇವು. ವಾಪಸ್ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಯಾರದ್ದೋ ಸಿಟ್ಟನ್ನು ಯಾರದ್ದೋ ಮೇಲೆ ಹಾಕಿದ್ದರು. ಕೊಲೆಗಡುಕರ ವಿರುದ್ದ ನಿಮ್ಮ ಆಕ್ರೋಶ ಇರಬೇಕಿತ್ತು. ಅನೇಕ ಹಿರಿಯರು ನಮ್ಮ ಪಕ್ಷ ಕಟ್ಟಿದ್ದಾರೆ. ನಮ್ಮ ಹಿರಿಯರ ಆದೆ ಒಂದೊಂದೇ ಈಡೇರುತ್ತಿವೆ.
ಸಿಟ್ಟು, ಆಕ್ರೋಶ, ನೋವು ನಿಜ. ಅದು ರಾಷ್ಟ್ರದ್ರೋಹಿಗಳ ವಿರುದ್ದ ಆಗಬೇಕು. 20% ಇರುವ ಮುಸ್ಲಿಮರು ಏನು ಬೇಕಾದ್ರೂ ಮಾಡಬೇಕಾದರೆ 80% ಇರುವ ಹಿಂದುಗಳು ಏನೆಲ್ಲಾ ಮಾಡಬಹುದು.
ಆದರೆ ನಾವು ಆ ರೀತಿ ಮಾಡುವುದಿಲ್ಲ. ಎಬಿವಿಪಿ ಪಿಎಫ್ ಐ ಎಸ್ ಡಿಪಿಐ ನಿಷೇಧ ಮಾಡಬೇಕು ಅಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಿಲುವು ಸಹ ಅದೇ ಆಗಿದೆ ಎಂದು ಸಚಿವರು ಹೇಳಿದ್ದಾರೆ.








