RSS ಸ್ವಯಂ ಸೇವಕರ ಪಾದ ಧೂಳಿಗೂ ನೀವು ಸರಿಸಮಾನರಲ್ಲ : ಸಿದ್ದುಗೆ ಈಶ್ವರಪ್ಪ ತಿರುಗೇಟು
ಶಿವಮೊಗ್ಗ : ಆರ್.ಎಸ್.ಎಸ್. ಸ್ವಯಂ ಸೇವಕರ ಪಾದದ ಧೂಳಿಗೂ ನೀವು ಸರಿಸಮಾನರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಗಲಭೆಗೆ ಪರಿವಾರದ ಬಿಕ್ಕಟ್ಟೇ ಕಾರಣ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಈ ಬಗ್ಗೆ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಕ್ಕೆ ಇಂತಹ ಕೆಟ್ಟ ಮುಖ್ಯಮಂತ್ರಿ ನೀಡಿದ್ದೆವೆಲ್ಲಾ ಎಂದು ಬೇಸರವಾಗುತ್ತೆ. ಸ್ವಯಂಸೇವಕರು, ಆರ್.ಎಸ್.ಎಸ್. ಬಗ್ಗೆ ಇವರು ಮೊದಲು ತಿಳಿದುಕೊಳ್ಳಲಿ. ಸಿದ್ದರಾಮಯ್ಯಗೆ ಆರ್.ಎಸ್.ಎಸ್. ಬಗ್ಗೆ ಎಬಿಸಿಡಿಯೂ ಗೊತ್ತಿಲ್ಲ. ಆರ್.ಎಸ್.ಎಸ್., ಸ್ವಯಂ ಸೇವಕರ ಪಾದದ ಧೂಳಿಗೂ ನೀವು ಸರಿಸಮಾನರಲ್ಲ ನೀವು ಎಂದು ಆಕ್ರೋಶ ಹೊರಹಾಕಿದ್ದಾರೆ.

ದೇಶದ ಆಶಾಕಿರಣವೇ ಆರ್.ಎಸ್.ಎಸ್. ರಾಷ್ಟ್ರದ್ರೋಹಿ ಎಂದು ಆರ್.ಎಸ್.ಎಸ್. ಗೆ ಕರೆಯುತ್ತಿರಾ..? ಒಂದೆರೆಡು ದಿನ ನೀವು ಕೂಡ ಆರ್.ಎಸ್.ಎಸ್. ಗೆ ಬನ್ನಿ. ಆರ್.ಎಸ್.ಎಸ್. ಬಗ್ಗೆ ಮಾತನಾಡುವ ಮುನ್ನಾ ನಿಮ್ಮ ನಾಲಿಗೆ ತೊಳೆದುಕೊಳ್ಳಿ. ಆರ್.ಎಸ್.ಎಸ್. ಬಗ್ಗೆ ಗಂಧಗಾಳಿ ಗೊತ್ತಿಲ್ಲದ ನೀವು ಇಂತಹ ಮಾತು ಏಕೆ ಆಡ್ತಿರಾ..? ಮೊದಲು ಇವರು ಆರ್.ಎಸ್.ಎಸ್. ಮತ್ತು ದೇಶದ ಜನರ ಕ್ಷಮೆ ಕೇಳಲಿ. ಒಕ್ಕಲಿಗರು, ಕುರುಬರ ನಾಯಕರು ಎಂದು ಬೀಗುವ ಇವರು ಮೊದಲು ಬಿಜೆಪಿ, ಆರ್.ಎಸ್.ಎಸ್. ಬಗ್ಗೆ ತಿಳಿದುಕೊಳ್ಳಲಿ ಎಂದು ಗುಡುಗಿದರು.








