Karnataka BJP | ‘ಹಿಂದೂ ರಕ್ಷಣೆ’ ಎಂದ ಬಿಜೆಪಿ ಮಾಡುತ್ತಿರೋದು 40% ಕಮಿಷನ್ ಭಕ್ಷಣೆ
ಬೆಂಗಳೂರು : ‘ಹಿಂದೂ ರಕ್ಷಣೆ’ ಎಂದು ಬಂದ ಬಿಜೆಪಿ ಮಾಡುತ್ತಿರುವುದು ಸ್ವರಕ್ಷಣೆ & 40% ಕಮಿಷನ್ ಭಕ್ಷಣೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟೀಕೆ ಮಾಡಿದೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಟ್ವಿಟ್ಟರ್ ನಲ್ಲಿ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಗಳ ಮೂಲಕ ಟೀಕೆ ಮಾಡಿದೆ.

ಟ್ವಿಟ್ಟರ್ ನಲ್ಲಿ.. ಬಿಜೆಪಿ ಸರ್ಕಾರ, ರೈತರ & ವಿದ್ಯಾರ್ಥಿಗಳ ವಿಶ್ವಾಸ ಗಳಿಸಲಿಲ್ಲ. ಬಡವರ ವಿಶ್ವಾಸ ಗಳಿಸಲಿಲ್ಲ. ಹೂಡಿಕೆದಾರರ ವಿಶ್ವಾಸ ಗಳಿಸಲಿಲ್ಲ. ಉದ್ಯೋಗಾಕಾಂಕ್ಷಿಗಳ ವಿಶ್ವಾಸ ಗಳಿಸಲಿಲ್ಲ. ಕನಿಷ್ಠ ತಮ್ಮದೇ ಪಕ್ಷದ ಕಾರ್ಯಕರ್ತ ವಿಶ್ವಾಸವನ್ನೂ ಉಳಿಸಿಕೊಳ್ಳಲಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಇನ್ನೂ ಏಕೆ ಕುರ್ಚಿ ಆಸೆ?
ಬೊಮ್ಮಾಯಿಯವರ ಆಡಳಿತಕ್ಕೆ ಅವರದ್ದೇ ಪಕ್ಷದ ಕಾರ್ಯಕರ್ತರು ಮೌಲ್ಯಮಾಪನ ಮಾಡಿ “ಫೇಲ್” ಎಂಬ ತೀರ್ಪು ಕೊಟ್ಟಿದ್ದಾರೆ.ಅವರದ್ದೇ ಪಕ್ಷದ ಶಾಸಕರು ಸಚಿವರಿಗೆ ಹಲವು ಬಾರಿ ಸೊನ್ನೆ ಮಾರ್ಕ್ಸ್ ಕೊಟ್ಟಿದ್ದಾರೆ. ‘ಆಕ್ಸಿಡೆಂಟಲ್ ಸಿಎಂ’ ಆಗಿರುವ ಬಸವರಾಜ ಬೊಮ್ಮಾಯಿ ಅವರ ಡಬಲ್ ಇಂಜಿನ್ ಸರ್ಕಾರ ಆಕ್ಸಿಡೆಂಟ್ ಆಗಿ ನಿಂತಿದೆ.
https://twitter.com/INCKarnataka/status/1553379893727023105?s=20&t=oWLmqmVGzh7C_mj4c1HqTQ
ಜನರನ್ನು ಸಾಯಲು ಬಿಟ್ಟು ಸರ್ಕಾರದವರು ರಕ್ಷಣೆ ಪಡೆಯುತ್ತಿದ್ದಾರೆ. ಅದೂ ಸ್ವಪಕ್ಷದ ಕಾರ್ಯಕರ್ತರ ಭಯದಿಂದ ರಕ್ಷಣೆ ಎನ್ನುವುದು ವಿಪರ್ಯಾಸ! ‘ಹಿಂದೂ ರಕ್ಷಣೆ’ ಎಂದು ಬಂದ ಬಿಜೆಪಿ ಮಾಡುತ್ತಿರುವುದು ಸ್ವರಕ್ಷಣೆ & 40% ಕಮಿಷನ್ ಭಕ್ಷಣೆ! ಎಲ್ಲರ ರಕ್ಷಣೆ ಅಸಾಧ್ಯ ಎಂದ ತೇಜಸ್ವಿ ಸೂರ್ಯ ಅವರೇ, ಇವರೆಲ್ಲ ರಕ್ಷಣೆ ಹೇಗೆ ಸಾಧ್ಯವಾಯ್ತು?
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೇ ಬಸವರಾಜ ಬೊಮ್ಮಾಯಿ ಅವರ ವಿಫಲ ಆಡಳಿತವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ! ಕೊಲೆಗಾರರಿಗೆ ರಾಜಮರ್ಯಾದೆ ಸಿಗುತ್ತದೆ, ಜನತೆಗೆ ರಕ್ಷಣೆ ಮರೀಚಿಕೆಯಾಗಿದೆ ಎನ್ನುವುದು ಇವರ ಮಾತಿನ ಅರ್ಥ. ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದ ಕಾರ್ಯಕರ್ತರು, ಶಾಸಕರು, ನಾಯಕರಿಂದ ಆಡಳಿತದ ಪಾಠ ಹೇಳಿಸಿಕೊಂಡು ಇರಬೇಕೆ ಎಂದು ಪ್ರಶ್ನಿಸಿದ್ದಾರೆ.








