Sanjay Raut: ಶಿವಸೇನಾ ನಾಯಕ ಸಂಜಯ್ ರಾವತ್ ರನ್ನ ವಶಕ್ಕೆ ಪಡೆದ ED
ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ ಅಧಿಕಾರಿಗಳು) ವಶಕ್ಕೆ ಪಡೆದಿದ್ದಾರೆ. ಸಂಜಯ್ ರಾವತ್ ಪ್ರಮುಖವಾಗಿ ರೂ.1000 ಕೋಟಿಗೂ ಹೆಚ್ಚು ಮೌಲ್ಯದ ಭೂ ಹಗರಣದ ಆರೋಪ ಹೊತ್ತಿದ್ದಾರೆ.
ಭಾನುವಾರ ಬೆಳಗ್ಗೆಯಿಂದ ಇಡಿ ಸಂಜಯ್ ರಾವತ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಇಡಿ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿತು. ಸಂಜೆಯ ವೇಳೆಗೆ ವಶಕ್ಕೆ ಪಡೆಯಲಾಯಿತು. ಸಂಜಯ್ ರಾವುತ್ ಬಂಧನದ ಸುದ್ದಿ ಕೋಲಾಹಲ ಎಬ್ಬಿಸುತ್ತಿದ್ದಂತೆ, ಶಿವಸೇನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅವರ ಮನೆಗೆ ತಲುಪಿದರು. ಸಂಜಯ್ ರಾವತ್ ಬೆಂಬಲ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳು ಮೊಳಗಿದವು. ಸಂಜಯ ರಾವುತ್ ಕಾರ್ಯಕರ್ತರನ್ನು ಅಭಿನಂದಿಸಿದರು.
ಮನಿ ಲಾಂಡರಿಂಗ್ ಕಾಯ್ದೆಯಡಿ ಇಡಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಮತ್ತೊಂದೆಡೆ, ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವುತ್ ಮತ್ತು ಅವರ ಇಬ್ಬರು ಆಪ್ತರಿಗೆ ಸೇರಿದ ಸುಮಾರು 11.15 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಗುರುಗ್ರಾಮ್ ಪ್ರದೇಶದಲ್ಲಿ ಪತ್ರಾ ಚಾವಲ್ ಮರು ಅಭಿವೃದ್ಧಿಗೆ ಸಂಬಂಧಿಸಿದ 1,034 ಕೋಟಿ ರೂಪಾಯಿ ಭೂ ಹಗರಣದಲ್ಲಿ ಪ್ರವೀಣ್ ರಾವುತ್ ಅವರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.








