Commonwealth Games – ಸಮಾರೋಪ ಸಮಾರಂಭದಲ್ಲಿ ಪಂಜಾಬಿ ನೃತ್ಯ ಪ್ರದರ್ಶನ
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಗೇಮ್ಸ್ ವರ್ಣ ರಂಜಿತ ತೆರೆ ಎಳೆಯಲಾಗಿದೆ. ಕ್ರೀಡಾಕೂಟದಲ್ಲಿ 72 ದೇಶಗಳ 4500 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದರು. ಆಸ್ಟ್ರೇಲಿಯಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನ ಕಾಯ್ದುಕೊಂಡಿದೆ. 61 ಪದಕಗಳೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದೆ.
ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ಪಂಜಾಬಿ ಹಾಡುಗಳಿಗೆ ನೃತ್ಯ ಮಾಡಲಾಯಿತು. ಬರ್ಮಿಂಗ್ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಭಾಂಗ್ರಾ ನೃತ್ಯ ಮಾಡಿದ್ದು, ಪಂಜಾಬಿ ಸಂಸ್ಕೃತಿ ಎಲ್ಲರನ್ನೂ ಸೆಳೆಯಿತು. ಸಮಾರಂಭದಲ್ಲಿ ಸಿಧು ಮೂಸೆವಾಲಾ ಮತ್ತು ರಾಜಿಂದರ್ ಸಿಂಗ್ ಅವರ ಹಾಡುಗಳನ್ನು ಸಹ ಪ್ಲೇ ಮಾಡಲಾಯಿತು.
ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಸಿದ್ದು ಮೂಸೆವಾಲಾ ಅವರ ಹಾಡು ಕೇಳಿಬರುತ್ತಿದೆ. ಸಿದ್ದು ಅಭಿಮಾನಿಗಳು ಈ ವಿಡಿಯೋವನ್ನ ಇಷ್ಟ ಪಡುತ್ತಿದ್ದಾರೆ. ಮುಂದಿನ ಕಾಮನ್‌ವೆಲ್ತ್ ಗೇಮ್ಸ್ 2026 ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಲಿದೆ.
Commonwealth Games – Punjabi dance performance at the closing ceremony.








