ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ. ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್‌ನಲ್ಲಿ SIR-2026, Electoral Roll ಹಾಗೂ ‘Search Your Name’ ಆಯ್ಕೆಗಳು ಲಭ್ಯವಿವೆ.
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ, ನಿಮ್ಮ ಮತಗಟ್ಟೆ ಹಾಗೂ ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿಕೊಳ್ಳಬಹುದು.
ಅಧಿಕೃತ ಚುನಾವಣಾ ಆಯೋಗದ ವೆಬ್‌ಸೈಟ್:
https://www.eci.gov.in/
ಹೇಗೆ ಚೆಕ್ ಮಾಡುವುದು?
ಮೇಲಿನ ಅಧಿಕೃತ ಲಿಂಕ್ ತೆರೆಯಿರಿ.
SIR-2026 / Electoral Roll ಆಯ್ಕೆಯನ್ನು ಆರಿಸಿ.
ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ ಹಾಗೂ ಅಗತ್ಯ ವಿವರಗಳನ್ನು ಆಯ್ಕೆ ಮಾಡಿ.
ನಿಮ್ಮ ಹೆಸರು ಮತ್ತು ಮತದಾರರ ವಿವರಗಳನ್ನು ಪರಿಶೀಲಿಸಿ.
ಗಮನಿಸಿ: ಕರಡು ಪಟ್ಟಿಯಲ್ಲಿ ಹೆಸರು ಅಥವಾ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದರೆ, ನಿಗದಿತ ಅವಧಿಯಲ್ಲಿ ಚುನಾವಣಾ ಅಧಿಕಾರಿಗಳಿಗೆ ಹಕ್ಕು/ಆಕ್ಷೇಪಣೆ ಸಲ್ಲಿಸುವ ಅವಕಾಶ ಇರುತ್ತದೆ. SIR ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಚುನಾವಣಾ ಆಯೋಗದ ವೆಬ್‌ಸೈಟ್‌ನ್ನೇ ಅವಲಂಬಿಸಿ.








