ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ಅವರು ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ರಾಜಸ್ಥಾನದ ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಕಾಜಿಯಾ ಈ ಪ್ರತಿಷ್ಠಿತ ಕಿರೀಟವನ್ನು ಗೆದ್ದಿದ್ದಾರೆ.
ಇದೀಗ ಮುಂಬರುವ ನವೆಂಬರ್ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾಜಿಯಾ ಲಿಜ್ ಮೆಜೊ ಭಾರತವನ್ನು ಪ್ರತಿನಿಧಿಸಲಿದ್ದಾರೆ.2025ರ ಮಿಸ್ ಯೂನಿವರ್ಸ್ ಇಂಡಿಯಾ ವಿಜೇತೆ ಮಣಿಕಾ ವಿಶ್ವಕರ್ಮ ಅವರು ಕಾಜಿಯಾ ಅವರಿಗೆ ವಿಜೇತರ ಕಿರೀಟ ತೊಡಿಸಿದರು.
ಕಾಜಿಯಾ ಅವರ ಈ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಕೇರಳದ ಈ ಯುವತಿಯ ಪಾಲಾಗಿದೆ. ದೇಶದಾದ್ಯಂತ ಅವರ ಮುಂದಿನ ಸ್ಪರ್ಧೆಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.








