ಜೆಫ್ ಬೆಜೋಸ್ ಸ್ಥಾಪನೆಯ ಬಾಹ್ಯಕಾಶ ಪ್ರವಾಸೋದ್ಯಮ – 1 ಟಿಕೆಟ್ ಮೌಲ್ಯ 10 ಕೋಟಿ…
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬಾಹ್ಯಾಕಾಶ ಕಂಪನಿ ಬ್ಲೂ ಒರಿಜಿನ್ ಗುರುವಾರ ಬಾಹ್ಯಾಕಾಶ ಪ್ರವಾಸೋದ್ಯಮಕ್ಕಾಗಿ ಆರು ಜನರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಕಂಪನಿಯ ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆಯು ಟೆಕ್ಸಾಸ್‌ನ ಲಾಂಚ್ ಸೈಟ್ ನಿಂದ ಹೊರಟು ಪ್ರಯಾಣಿಕರನ್ನು ಭೂಮಿಯಿಂದ 107 ಕಿಮೀ ಎತ್ತರಕ್ಕೆ ಕೊಂಡೊಯ್ದಿದೆ. ಅಲ್ಲಿಂದ ಜನರು ಪ್ಯಾರಾಚೂಟ್ ಮೂಲಕ ಭೂಮಿಗೆ ಮರಳಿದ್ದಾರೆ.
ಈ ಬಾಹ್ಯಾಕಾಶ ಪ್ರವಾಸಕ್ಕೆ ತೆಗೆದುಕೊಂಡಿದ್ದು ಕೇವಲ 10 ನಿಮಿಷ 20 ಸೆಕೆಂಡುಗಳು ಮಾತ್ರ. ಈ ಸಮಯದಲ್ಲಿ ಬಾಹ್ಯಾಕಾಶ ನೌಕೆಯ ಗರಿಷ್ಠ ವೇಗವು 2,239 mph ಆಗಿತ್ತು, ಅಂದರೆ ಗಂಟೆಗೆ 3,603 ಕಿಲೋಮೀಟರ್.
ದಾಖಲೆ ನಿರ್ಮಿಸಿದ ಬ್ಲೂ ಹಾರಿಜನ್
ಈ ಹಾರಾಟದ ಮೂಲಕ ಬ್ಲೂ ಒರಿಜಿನ್ ಹೊಸ ವಿಶ್ವ ದಾಖಲೆಯನ್ನೂ ನಿರ್ಮಿಸಿದೆ. ಮೊದಲ ಬಾರಿಗೆ ಈಜಿಪ್ಟ್ ಮತ್ತು ಪೋರ್ಚುಗಲ್ ಜನರು ಬಾಹ್ಯಾಕಾಶ ಪ್ರವಾಸೋದ್ಯಮದ ಭಾಗವಾಗಿದ್ದಾರೆ. ಇಂಜಿನಿಯರ್ ಸಾರಾ ಸಾಬ್ರಿ ಮೊದಲ ಈಜಿಪ್ಟಿನವರಾದರೇ, ಉದ್ಯಮಿ ಮಾರಿಯೋ ಫೆರೇರಾ ಬಾಹ್ಯಾಕಾಶಕ್ಕೆ ಹೋದ ಮೊದಲ ಪೋರ್ಚುಗೀಸ್ ನವರಾಗಿದ್ದಾರೆ.
ಬಾಹ್ಯಾಕಾಶ ಪ್ರವಾಸದಲ್ಲಿ ಯೂಟ್ಯೂಬ್ ಚಾನೆಲ್ ಡ್ಯೂಡ್ ಪರ್ಫೆಕ್ಟ್‌ನ ಸಹ-ಸಂಸ್ಥಾಪಕರಾದ ಕೋಬಿ ಕಾಟನ್, ಬ್ರಿಟಿಷ್-ಅಮೆರಿಕನ್ ಪರ್ವತಾರೋಹಿ ವನೆಸ್ಸಾ ಒ’ಬ್ರೇನ್, ತಂತ್ರಜ್ಞಾನದ ನಾಯಕ ಕ್ಲಿಂಟ್ ಕೆಲ್ಲಿ ಥರ್ಡ್ ಮತ್ತು ದೂರಸಂಪರ್ಕ ಕಾರ್ಯನಿರ್ವಾಹಕ ಸ್ಟೀವ್ ಯಂಗ್ ಕೂಡ ಸೇರಿದ್ದಾರೆ.
ಸುಮಾರು 10 ಕೋಟಿ ಮೌಲ್ಯದ ಟಿಕೆಟ್
ಕ್ವಾರ್ಟ್ಜ್ ವರದಿಯ ಪ್ರಕಾರ, ಬ್ಲೂ ಒರಿಜಿನ್‌ನ ಬಾಹ್ಯಾಕಾಶ ನೌಕೆಯ ಟಿಕೆಟ್‌ನ ಬೆಲೆ $1.25 ಮಿಲಿಯನ್ ಅಥವಾ 9,89,73,750 ರೂ. ಬ್ಲೂ ಹಾರಿಜನ್ ಇಲ್ಲಿಯವರೆಗೆ ಜನರನ್ನು 6 ಬಾರಿ ಬಾಹ್ಯಾಕಾಶಕ್ಕೆ ಪ್ರಯಾಣಿಸುವಂತೆ ಮಾಡಿದೆ. ಈ ಮೂಲಕ ಸಂಸ್ಥೆಯು ಇದುವರೆಗೆ 31 ಮಂದಿ ಬಾಹ್ಯಾಕಾಶಕ್ಕೆ ತೆರಳುವಂತೆ ಮಾಡಿದೆ.








