ADVERTISEMENT
Saturday, March 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನೀವು ಎಂದಾದ್ರೂ ಲಕ್ಷ್ಮಣ್ ಸಿಟ್ಟು ಮಾಡಿಕೊಂಡಿರುವುದನ್ನು ನೋಡಿದ್ದೀರಾ… ಆ ಪಂದ್ಯವೊಂದನ್ನು ಬಿಟ್ಟು…!

admin by admin
June 3, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ವಿವಿಎಸ್ ಲಕ್ಷ್ಮಣ್. ಹೆಸರಿಗೆ ತಕ್ಕಂತೆ ವಿಶ್ವ ಕ್ರಿಕೆಟ್‍ನ ವೆರಿ ವೆರಿ ಸ್ಪೆಷಲ್ ಆಟಗಾರ. ಟೀಮ್ ಇಂಡಿಯಾದ ಪಾಲಿಗೆ ಎದುರಾಳಿ ಬೌಲರ್‍ಗಳಿಗೆ ಲಕ್ಷ್ಮಣ್ ಲಕ್ಷಣ ರೇಖೆ ಇದ್ದಂತೆ. ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಲ್ಕು ಬ್ಯಾಟಿಂಗ್ ಪಿಲ್ಲರ್‍ಗಳಲ್ಲಿ ಲಕ್ಷ್ಮಣ್ ಕೂಡ ಒಬ್ಬರು.

ಆದ್ರೆ ಸಚಿನ್, ದ್ರಾವಿಡ್, ಗಂಗೂಲಿಯ ಅಬ್ಬರದ ನಡುವೆ ಲಕ್ಷ್ಮಣ್ ಪ್ರಭಾವಳಿ ಸ್ವಲ್ಪ ಕಡಿಮೆಯಾಗಿರಬಹುದು. ಆದ್ರೂ ಲಕ್ಷ್ಮಣ್ ತನ್ನ ಮಣಿಕಟ್ಟಿನ ಬ್ಯಾಟಿಂಗ್ ಶೈಲಿಯಿಂದಲೇ ವಿಶ್ವ ಕ್ರಿಕೆಟ್ ನಲ್ಲಿ ತನ್ನದೇ ಆದ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ.

Related posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (28-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 28, 2026
ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

March 27, 2026

ಇನ್ನು ಲಕ್ಷ್ಮಣ್ ಸ್ವಭಾವ ಕೂಡ ಅಷ್ಟೇ. ಮೃದು ವ್ಯಕ್ತಿತ್ವ. ಶಾಂತ ಸ್ವರೂಪಿ. ಸ್ಟೈಲೀಶ್ ಬ್ಯಾಟಿಂಗ್ ನಂತೆ ತನ್ನ ವ್ಯಕ್ತಿತ್ವವನ್ನು ಕೂಡ ರೂಪಿಸಿಕೊಂಡಿರುವ ಲಕ್ಷ್ಮಣ್ ಯಾವತ್ತೂ ಕೂಡ ಮೈದಾನದಲ್ಲಿ ಸಿಟ್ಟು ಮಾಡಿಕೊಂಡಿರಲಿಲ್ಲ.

ಆದ್ರೆ ಒಂದು ಪಂದ್ಯದಲ್ಲಿ ಲಕ್ಷ್ಮಣ್ ಯಾವ ರೀತಿ ಸಿಟ್ಟು ಮಾಡಿಕೊಂಡಿದ್ದರು ಎಂಬುದನ್ನು ಸುರೇಶ್ ರೈನಾ ಹೇಳಿಕೊಂಡಿದ್ದಾರೆ. ಬಹುಶಃ ಲಕ್ಷ್ಮಣ್ ಅವರು ಆ ರೀತಿ ಸಿಟ್ಟು ಮಾಡಿಕೊಂಡಿರುವುದನ್ನು ನಾನು ಯಾವತ್ತೂ ನೋಡಿಲ್ಲ ಎಂದು 2010ರ ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

ಅದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ. ಗೆಲ್ಲಲು ಭಾರತಕ್ಕೆ 216 ರನ್‍ಗಳು ಬೇಕಿದ್ದವು. ಆಸೀಸ್‍ನ ಮಾರಕ ದಾಳಿಗೆ ತತ್ತರಿಸಿದ್ದ ಭಾರತ 124 ರನ್ ಗಳಿಸುವಷ್ಟರಲ್ಲಿ ಎಂಟು ವಿಕೆಟ್‍ಗಳನ್ನು ಕಳೆದುಕೊಂಡಿತ್ತು. ಇನ್ನೇನೂ ಪಂದ್ಯದಲ್ಲಿ ಸೋಲು ಖಚಿತ ಅಂದುಕೊಂಡುವಷ್ಟರಲ್ಲಿ ಲಕ್ಷ್ಮಣ್ ಅದ್ಭುತವಾದ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವನ್ನು ಒದಗಿಸಿಕೊಟ್ಟಿದ್ದರು.

9ನೇ ವಿಕೆಟ್‍ಗೆ ಇಶಾಂತ್ ಶರ್ಮಾ ಜೊತೆ 81 ರನ್‍ಗಳ ಜೊತೆಯಾಟವನ್ನು ಆಡಿದ್ದರು. ಈ ಹಂತದಲ್ಲಿ 32 ರನ್‍ಗಳಿಸಿದ್ದ ಇಶಾಂತ್ ವಿಕೆಟ್ ಒಪ್ಪಿಸಿದ್ದರು. ಆಗ ಭಾರತಕ್ಕೆ ಗೆಲ್ಲಲು ಇನ್ನೂ 11 ರನ್‍ಗಳು ಬೇಕಿದ್ದವು. ಆ ಹಂತದಲ್ಲಿ ಪ್ರಗ್ಯಾನ್ ಓಜ್ಹಾ ಜೊತೆ ಸೇರಿಕೊಂಡು ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದರು. ಲಕ್ಷ್ಮಣ್ ಅಜೇಯ 73 ರನ್ ಹಾಗೂ ಓಜ್ಹಾ ಅಜೇಯ 5 ರನ್ ದಾಖಲಿಸಿದ್ದರು.

ಈ ಪಂದ್ಯದ ಕೊನೆಯ ಹಂತದಲ್ಲಿ ಲಕ್ಷ್ಮಣ್ ಸಂಪೂರ್ಣವಾಗಿ ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದರು. ಲಕ್ಷ್ಮಣ್ ಆ ರೀತಿ ಸಿಟ್ಟು ಮಾಡಿಕೊಂಡಿರುವುದನ್ನು ನಾನು ಯಾವತ್ತೂ ನೋಡಿಲ್ಲ. ಮತ್ತೊಂದೆಡೆ ಲಕ್ಷ್ಮಣ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಲಕ್ಷ್ಮಣ್‍ಗೆ ರನ್ನರ್ ಆಗಿ ನಾನು ಕ್ರೀಸ್‍ಗೆ ಹೋಗಿದ್ದೆ. ಮಿಚ್ಟೆಲ್ ಜಾನ್ಸನ್ ರಿವರ್ಸ್ ಸ್ವಿಂಗ್ ಮೂಲಕ ತಲೆನೋವಾಗಿ ಪರಿಣಮಿಸುತ್ತಿದ್ದರು.

ಈ ಹಂತದಲ್ಲಿ ಲಕ್ಷ್ಮಣ್‍ಗೆ ಸ್ಟ್ರೈಕ್ ಸಿಗುವಂತೆ ಮಾಡೋದು ನಮ್ಮ ಪ್ಲಾನ್ ಆಗಿತ್ತು. ಹಾಗಾಗಿ ಲಕ್ಷ್ಮಣ್ ರನ್ ಓಜ್ಹಾ ರನ್ ಅಂತ ಹೇಳುತ್ತಲೇ ಇದ್ರು ಎಂದು ಸುರೇಶ್ ರೈನಾ ನೆನಪಿಸಿಕೊಂಡಿದ್ದಾರೆ.  ಸುರೇಶ್ ರೈನಾ ಒಂದು ವಾರದ ಹಿಂದೆಯಷ್ಟೇ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 86 ರನ್ ದಾಖಲಿಸಿದ್ದರು.

Tags: VVS Laxman
ShareTweetSendShare
Join us on:

Related Posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (28-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 28, 2026
0

ದಿನ ಭವಿಷ್ಯ: 28-03-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಶನಿವಾರವಾಗಿರುವುದರಿಂದ ಕೆಲಸದಲ್ಲಿ ಸ್ವಲ್ಪ ನಿಧಾನಗತಿ ಕಂಡುಬರಬಹುದು. ತಾಳ್ಮೆ ಅತ್ಯಗತ್ಯ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಒತ್ತಡ...

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

by Shwetha
March 27, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇರಾನ್–ಅಮೆರಿಕ ಹಾಗೂ ಇಸ್ರೇಲ್ ನಡುವಿನ ಯುದ್ಧದ...

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

by Shwetha
March 27, 2026
0

ರಾಜ್ಯದಲ್ಲಿ ವಾಹನ ನೋಂದಣಿ ತೆರಿಗೆಯನ್ನು ಇಳಿಸುವ ಮಹತ್ವದ ತಿದ್ದುಪಡಿ ವಿಧೇಯಕ ಅಂಗೀಕರಿಸಲಾಗಿದೆ. ಈ ಮೂಲಕ 2026-27ನೇ ಸಾಲಿನಲ್ಲಿ ಹೊಸ ವಾಹನಗಳ ನೋಂದಣಿಯಿಂದ ಸುಮಾರು ₹250 ಕೋಟಿ ಆದಾಯ...

ವಿಧಾನಸೌಧದಲ್ಲಿ ಐಪಿಎಲ್ ಗದ್ದಲ: ನಾವು ವಿಐಪಿಗಳು, ಕ್ಯೂನಲ್ಲಿ ನಿಲ್ಲಲ್ಲ! ಆರ್​ಸಿಬಿ ಟಿಕೆಟ್​ಗಾಗಿ ಪಟ್ಟು ಹಿಡಿದ ಶಾಸಕರು

ವಿಧಾನಸೌಧದಲ್ಲಿ ಐಪಿಎಲ್ ಗದ್ದಲ: ನಾವು ವಿಐಪಿಗಳು, ಕ್ಯೂನಲ್ಲಿ ನಿಲ್ಲಲ್ಲ! ಆರ್​ಸಿಬಿ ಟಿಕೆಟ್​ಗಾಗಿ ಪಟ್ಟು ಹಿಡಿದ ಶಾಸಕರು

by Shwetha
March 27, 2026
0

ಬೆಂಗಳೂರು: ರಾಜ್ಯದಲ್ಲಿ ಐಪಿಎಲ್ ಕ್ರಿಕೆಟ್ ಜ್ವರ ತಾರಕಕ್ಕೇರಿದ್ದು, ಈ ಬಿಸಿಯು ಈಗ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧಕ್ಕೂ ವ್ಯಾಪಿಸಿದೆ. ಅಭಿಮಾನಿಗಳು ಟಿಕೆಟ್‌ಗಾಗಿ ಕ್ರೀಡಾಂಗಣದ ಹೊರಗೆ ಮತ್ತು ಆನ್‌ಲೈನ್‌ನಲ್ಲಿ...

ಬ್ರೋಕನ್ ಪಾಕಿಸ್ತಾನ ಇಂದು ಬ್ರೋಕರ್ ಆಗಲು ಮೋದಿಯೇ ಕಾರಣ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ

ಬ್ರೋಕನ್ ಪಾಕಿಸ್ತಾನ ಇಂದು ಬ್ರೋಕರ್ ಆಗಲು ಮೋದಿಯೇ ಕಾರಣ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ

by Shwetha
March 27, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಮತ್ತು ರಾಜತಾಂತ್ರಿಕ ವೈಫಲ್ಯಗಳಿಂದಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಸ್ಥಿರವಾಗಿದ್ದ ಪಾಕಿಸ್ತಾನವು ಇಂದು ಜಾಗತಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram