ಚಿಪ್ ಉತ್ಪಾದನೆಯಲ್ಲಿ ಚೀನಾ ಪ್ರಾಬಲ್ಯ ಕೊನೆಗೊಳಿಸಲು ಮುಂದಾದ ಅಮೆರಿಕಾ..
ಯುಎಸ್ ಅಧ್ಯಕ್ಷ ಜೋ ಬಿಡನ್ ಮಂಗಳವಾರ ಬಹಳ ಮಹತ್ವದ ಮಸೂದೆಗೆ ಸಹಿ ಹಾಕಿದೆ. ಈ ಮಸೂದೆಯ ಮೂಲಕ ಅಮೆರಿಕ ಈಗ ಸೆಮಿಕಂಡೆಕ್ಟರ್ ಮತ್ತು ಚಿಪ್ ಉತ್ಪಾದನೆಯಲ್ಲಿ ಚೀನಾದ ಪ್ರಾಬಲ್ಯವನ್ನು ಕೊನೆಗೊಳಿಸಲಿದೆ. $ 200 ಶತಕೋಟಿಯ ಈ ಮಸೂದೆಯ ಮೂಲಕ, ಈ ಕ್ಷೇತ್ರದಲ್ಲಿ ಚೀನಾವನ್ನು ಸೋಲಿಸಲು ಅಮೆರಿಕಾದ ಕಂಪನಿಗಳಿಗೆ ಸಹಾಯವನ್ನು ನೀಡಲಾಗುವುದು.
ಚೀನಾ ತೈವಾನ್ ಮೇಲೆ ದಾಳಿ ಮಾಡಿದರೆ, ಸೆಮಿಕಂಡಕ್ಟರ್ ಮತ್ತು ಚಿಪ್ ಮಾರುಕಟ್ಟೆಯಲ್ಲಿ ಬಿಕ್ಕಟ್ಟು ಉಂಟಾಗಲಿದೆ. ಸೆಮಿಕಂಡಕ್ಟರ್ ಗಳಲ್ಲಿ ತೈವಾನ್ 63% ಉತ್ಪಾದಿಸದರೆ ಚೀನಾ ಸುಮಾರು 7% ಅರೆವಾಹಕಗಳು ಮತ್ತು ಚಿಪ್‌ಗಳನ್ನು ಉತ್ಪಾದಿಸುತ್ತದೆ.
ನ್ಯೂಯಾರ್ಕ್ ಪೋಸ್ಟ್’ ಪ್ರಕಾರ, ಚಿಪ್ಸ್ ಮತ್ತು ಸೈನ್ಸ್ ಆಕ್ಟ್ ಹೆಸರಿನ ಈ ಮಸೂದೆಯಲ್ಲಿ ಅಮೆರಿಕನ್ ಕಂಪನಿಗಳಿಗೆ $ 200 ಬಿಲಿಯನ್ ಹಂಚಿಕೆ ಮಾಡಲಾಗಿದೆ. ಈ ಮೂಲಕ ಐದು ವರ್ಷಗಳಲ್ಲಿ ಅಮೆರಿಕದ ಕಂಪನಿಗಳು ಚೀನಾಕ್ಕೆ ಸೆಮಿಕಂಡಕ್ಟರ್ ಮತ್ತು ಚಿಪ್ ಸೆಟ್ ತಯಾರಿಕೆಯಲ್ಲಿ ಪೈಪೋಟಿ ನಿಡಲಿವೆ.








