Umesh Katthi | ಅಧಿಕಾರಿಗೆ ಬೂಟಿನಿಂದ ಹೊಡೆಯುತ್ತೇನೆ ಎಂದ ಕತ್ತಿ
ವಿಜಯಪುರ : ಶೀಘ್ರವಾಗಿ ವಿಮಾನ ನಿಲ್ದಾಣ ಕಾಮಗಾರಿ ಮಾಡಿದ್ರೆ ಹೂಮಾಲಿ ಹಾಕುತ್ತೀನಿ ಇಲ್ಲಂದ್ರೆ ನಿನಗೆ ಬೂಟಿನಿಂದ ಹೊಡೆಯುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ಲೋಕೋಪಯೋಗಿ ಇಲಾಖೆಯ ಅಭಿಯಂತರಿಗೆ ಅವಾಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ.
ಬುರಣಾಪುರ ವಿಮಾನ ನಿಲ್ಡಾಣ ಕಾಮಗಾರಿ ಪರಿಶೀಲನೆ ವೇಳೆ ಲೋಕೋಪಯೋಗಿ ಇಲಾಖೆ ಅಭಿಯಂತರ ಅವರು ನವೆಂಬರ್ ಇಲ್ಲವೆ ಡಿಸೆಂಬರ್ ವೇಳೆ ಕಾಮಗಾರಿ ಪೂರ್ಣಗೊಳಿಸಲಾಗುವುದು ವಿವರಿಸಿದರು.

ಈ ವೇಳೆ ಸಚಿವರು, ನವೆಂಬರ್, ಡಿಸೆಂಬರ್ ಬೇಡ. ಮಾರ್ಚ್ ನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು.
ಆಗ ನಾನು ಹೂವಿನ ಹಾರ ಹಾಕುತ್ತೇನೆ. ಇಲ್ಲದಿದ್ದರೇ ಬೂಟಿನಿಂದ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸ್ಥಳದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳಿದ್ದರು.








