Mysugar Factory | ಮಂಡ್ಯದ ಮೈ ಶುಗರ್ ಕಾರ್ಖಾನೆ ಇಂದಿನಿಂದ ಆರಂಭ – My sugar factory reopen
ಮಂಡ್ಯ : ಹಲವು ಕಾರಣಗಳಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಮಂಡ್ಯದ ಮೈ ಶುಗರ್ ಇಂದಿನಿಂದ ಆರಂಭವಾಗಿದೆ.
2017 – 18ರ ಸಾಲಿನಲ್ಲಿ ನಷ್ಟಕ್ಕೆ ಸಿಲುಕಿ ಕಾರ್ಖಾನೆಯನ್ನು ಬಂದ್ ಮಾಡಲಾಗಿತ್ತು.
ಇದಾದ ಬಳಿಕ ಸರ್ಕಾರ ಕಾರ್ಖಾಯನ್ನು ಖಾಸಗಿಯವರಿಗೆ ನೀಡಲು ಮುಂದಾಗಿತ್ತು.

ಇದಕ್ಕೆ ಜಿಲ್ಲೆಯ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಪ್ರತಿಭಟನೆಗಳು ಕೂಡ ನಡೆದಿದ್ದವು.
ಇದರಿಂದಾಗಿ ಸರ್ಕಾರ ತನ್ನ ನಿರ್ಧಾರವನ್ನು ಕೈ ಬಿಟ್ಟಿತ್ತು. ಅಲ್ಲದೇ ಸರ್ಕಾರವೇ ಕಾರ್ಖಾನೆಯನ್ನು ನಡೆಸುವ ಭರಸವೆ ನೀಡಿತ್ತು.
ಅದರಂತೆ ಇದೀಗ ಮೈ ಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ಸರ್ಕಾರ ಮುಂದಾಗಿದೆ.
ಇಂದು ಕಾರ್ಖಾನೆಯ ಬಾಯ್ಲರ್ ಗೆ ಸಚಿವ ಗೋಪಾಲಯ್ಯ ಅಗ್ನಿ ಸ್ಪರ್ಶ ಮಾಡುವ ಮೂಲಕ ಮೈ ಶುಗರ್ ಆರಂಭಕ್ಕೆ ಚಾಲನೆ ನೀಡಲಿದ್ದಾರೆ.








