ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲವಾಗಿದೆ. ವೆನ್ಲಾಕ್ ಆಸ್ಪತ್ರೆ ಖಾಲಿ ಮಾಡಿದ್ದಾರೆ. ಇದರಿಂದಾಗಿ ಬಡವರ್ಗದ ಜನ ಸಂಕಷ್ಟ ಪಡುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ. ಖಾದರ್, ಜಿಲ್ಲೆಯಲ್ಲಿ ವೆನ್ಲಾಕ್ ಆಸ್ಪತ್ರೆ ಖಾಲಿ ಮಾಡುವಾಗ ಯಾರಿಗೂ ಹೇಳಿಲ್ಲ.ಖಾಸಗಿ ಆಸ್ಪತ್ರೆ ಗಳಲ್ಲಿ ಬಡವರಿಗೆ ಹಣ ಕಟ್ಟಲು ಆಗುವುದಿಲ್ಲ.ಬೆಂಗಳೂರಿನ ರೀತಿ ಮಂಗಳೂರು ಅಲ್ಲ. ಬೆಂಗಳೂರಿನಲ್ಲಿ 10 ಸರ್ಕಾರಿ ಆಸ್ಪತ್ರೆ ಇವೆ. ಮಂಗಳೂರಿನಲ್ಲಿ ಒಂದೇ ಸರ್ಕಾರಿ ಆಸ್ಪತ್ರೆ ಇದೆ.
ವೆನ್ಲಾಕ್ ತಕ್ಷಣ ಒಪಿಡಿ ಆರಂಭ ಮಾಡಬೇಕು.ದ.ಕ ಜಿಲ್ಲಾಡಳಿತ ಬಡವರ ಕಷ್ಟವನ್ನು ಅರಿಯಬೇಕು ಎಂದು ಯು.ಟಿ ಖಾದರ್ ಅಸಮಾಧಾನ ಹೊರಹಾಕಿದ್ದಾರೆ.








