ಕೊಪ್ಪಳ : ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾಳು ಮಾಡಿದ್ದರು ಎಂದು ವಸತಿ ಸಚಿವ ವಿ. ಸೋಮಣ್ಣ ಆರೋಪಿಸಿದ್ದರು. ಈ ಹೇಳಿಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿದ್ದರಾಮಯ್ಯ, ವಸತಿ ಸಚಿವ ಸೋಮಣ್ಣ ಅವರಿಗೆ ಆರ್ಥಿಕ ವ್ಯವಸ್ಥೆ ಬಗ್ಗೆ ಅಜ್ಞಾನವಿದೆ ಎನ್ನುವ ಮೂಲಕ ತೀರುಗೇಟು ನೀಡಿದರು.
ಇಂದು ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಕಾಲದಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಸರಕಾರ ಮೊದಲ ಸ್ಥಾನದಲ್ಲಿತ್ತು. ಸೋಮಣ್ಣ
ರಾಜಕೀಯಕ್ಕಾಗಿ ಏನೇನೋ ಮಾತಾಡ್ತಾರೆ. ಸೋಮಣ್ಣ ಯಾವ ಆರ್ಥಿಕ ತಜ್ಞರಿ?. ರಾಜ್ಯದ ಆರ್ಥಿಕ ಸ್ಥಿತಿ ಈಗ ದಿವಾಳಿಯಾಗಿದೆ. ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ.ಇದು ಕರ್ನಾಟಕದ ಕಥೆ ಮಾತ್ರವಲ್ಲ, ಇಡೀ ದೇಶದ ಸ್ಥಿತಿಯೇ ಹೀಗಾಗಿದೆ. ಕೊರೊನಾ ಬರೋದಕ್ಕಿಂತ ಮುಂಚೆಯಿಂದಲೂ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಸೋಮಣ್ಣನವರಿಗೆ ಸಂಸ್ಕೃತಿ ಇಲ್ಲ. ಬಿಜೆಪಿಯವರ ಹಾಗೆ ನಾನು ಕೀಳುಮಟ್ಟಕ್ಜೆ ಇಳಿಯಲ್ಲ.
ನನ್ನ ಮತ್ತು ಡಿಕೆಶಿ ನಡುವೆ ಅತ್ಯುತ್ತಮ ಬಾಂಧವ್ಯ, ಸಂಬಂಧ ಇದೆ.ನಮ್ಮ ನಡುವೆ ಸರಿ ಇಲ್ಲ ಅನ್ನೋದೆಲ್ಲ ಶುದ್ಧ ಸುಳ್ಳು. ಎಚ್ಚರಿಕೆ ವಹಿಸಿದರೆ ಕೊರೊನಾ ಹರಡಲ್ಲ. ಕೊರೋನಾ ಬಗ್ಗೆ ತಿಳಿದುಕೊಳ್ಳುವುದು ಕಾಮನ್ ಸೆನ್ಸ್. ಕೊರೊನಾ ಬಗ್ಗೆ ಮಾತಾಡೋಕೆ ಪಿಎಚ್‌ಡಿ ಮಾಡಬೇಕಿಲ್ಲ. ಬಿ.ಸಿ.ಪಾಟೀಲ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.








