ಹೊಸದಿಲ್ಲಿ, ಜೂನ್ 3 : ಆ್ಯಪ್ ತೆಗೆದುಹಾಕುತ್ತಿರುವ ಕುರಿತಾಗಿ ಟ್ವಿಟರ್ನಲ್ಲಿ ಹೇಳಿಕೊಂಡಿರುವ ಗೂಗಲ್, ಜೈಪುರ ಮೂಲದ ಒನ್ ಟಚ್ ಆ್ಯಪ್ ಲ್ಯಾಬ್ಸ್ ಅಪ್ಲಿಕೇಶನ್ನ ಡೆವಲಪರ್ ನ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ನಿಂದ ಅಮಾನತುಗೊಳಿಸಲಾಗಿದೆ ಎಂದು ಬರೆದುಕೊಂಡಿದೆ. ಆದರೆ ಅಪ್ಲಿಕೇಶನ್ ಅನ್ನು ಏಕೆ ತೆಗೆದುಹಾಕಲಾಗಿದೆ ಎಂಬುವುದರ ಬಗ್ಗೆ ಸಂಸ್ಥೆಯು ಯಾವುದೇ ಸ್ಪಷ್ಟನೆ ನೀಡಿಲ್ಲ.
ಗೂಗಲ್ ಪ್ಲೇ ಸ್ಟೋರ್ ತನ್ನ ನಿಯಮಗಳನ್ನು ಉಲ್ಲಂಘಿಸುವ ಅಪ್ಲಿಕೇಶನ್ಗಳನ್ನು ತೆಗೆದುಹಾಕುತ್ತದೆ. ಮಿಟ್ರಾನ್ ಆ್ಯಪ್ ಇದೇ ಕಾರಣಕ್ಕಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಯಿತು. ಆದರೆ ಮೊಬೈಲ್ ನಲ್ಲಿ ಚೀನಾ ಅಪ್ಲಿಕೇಶನ್ಗಳನ್ನು ಗುರುತಿಸಿ ಮೊಬೈಲ್ ನಿಂದ ತೆಗೆಯಲು ಅನುಮತಿ ಕೇಳುತ್ತಿದ್ದ ರಿಮೊವ್ ಚೈನಾ ಅ್ಯಪ್ ಅನ್ನು ಏಕೆ ತೆಗೆದುಹಾಕಲಾಗಿದೆ ಎಂಬ ಬಗ್ಗೆ ಗೂಗಲ್ ಇನ್ನೂ ಸ್ಪಷ್ಟನೆಯನ್ನೂ ನೀಡಿಲ್ಲ.








