Lal singh Chadda : ನಿರ್ಮಾಕರಿಗೆ ನಷ್ಟವೂ ಆಗಿಲ್ಲ , ಸಿನಿಮಾ ಸೋತೂ ಇಲ್ಲ..!!!ದುಡ್ಡು ವಾಪಸ್ ಕೊಡುವಂತೆ ವಿತರಕರು ಪೀಡಿಸುತ್ತಿರುವ ಸುದ್ದಿ ಸುಳ್ಳು..!!! ಅಸಲಿ ಕಥೆ ಏನು..??
ಬಾಲಿವುಡ್ ಬಹುನಿರೀಕ್ಷೆಯ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತಾದ್ರೂ ಸಿನಿಮಾ ನೀರಸ ಪ್ರದರ್ಶನ ಕಂಡಿದೆ.. 10 ವರ್ಷಗಳಲ್ಲೇ ಅಮಿರ್ ಖಾನ್ ಅವರ ಸಿನಿಮಾವೊಂದು ಮೊದಲ ದಿನ ಇಷ್ಟು ಕಡಿಮೆ ಮಟ್ಟದ ಗಳಿಕೆ ಕಂಡಿದೆ ಎನ್ನಲಾಗ್ತಿದೆ…
ಆರಂಭಿಕ ದಿನದಲ್ಲಿ 15-20 ಶೇಕಡಾ ಆಕ್ಯುಪೆನ್ಸಿಯನ್ನು ದಾಖಲಿಸಿದೆ ಎಂದು ವರದಿಯಾಗಿದೆ.
ನಾಲ್ಕು ದಿನಕ್ಕೆ ಸಿನಿಮಾ ಗಳಿಸಿರುವುದು ಕೇವಲ 40 ಕೋಟಿಯಷ್ಟೆ. ಅಲ್ಲದೇ ಸಿನಿಮಾದ ನಿರ್ಮಾಪಕರಿ (ಸಹ ನಿರ್ಮಾಕರು ಅಮಿರ್ ಖಾನ್ ) ಗೆ ಲಾಸ್ ಆಗಿದೆ ಎಂದೆಲ್ಲಾ ಹೇಳಲಾಗ್ತಿದೆ… ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಸೋತು ಹೋಗಿದೆ ಎಂಬ ಮಾತುಗಳ ನಡುವೆ ಸಿನಿಮಾ ವಿತರಣೆ ಮಾಡಿರುವ ವಿತರಕರು ತೀವ್ರ ನಷ್ಟ ಅನುಭವಿಸಿದ್ದು, ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈ ಸುದ್ದಿ ಸುಳ್ಳು ಎಂದು ತಿಳಿಸಿದೆ ಸಿನಿಮಾ ನಿರ್ಮಾಣ ಸಂಸ್ಥೆ ವೈಯೋಕಾಮ್ 18.. ಅಮಿರ್ ಖಾನ್ ಜೊತೆಗೂಡಿ ಜಂಟಿಯಾಗಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದ ವೈಯೋಕಾಮ್ 18 ಈ ಸಿನಿಮಾವನ್ನ ವಿತರಣೆ ಸಹ ಮಾಡಿತ್ತು.. ಇದೀಗ ಇದೇ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದೆ..
ಸಿನಿಮಾದಿಂದ ವಿತರಕರು ನಷ್ಟ ಹೋಗಿರುವ ಬಗ್ಗೆ ಹಾಗೂ ಆಮಿರ್ ಖಾನ್ ವಿರುದ್ಧ ಒತ್ತಡ ಹೇರುತ್ತಿರುವ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ವೈಯೊಕಾಮ್ 18 ಸ್ಟುಡಿಯೋಸ್ ನ CEO ಅಜಿತ್ ಅಂಧಾರೆ ಸ್ಪಷ್ಟಪಡಿಸಿದ್ದಾರೆ.. ಜೊತೆಗೆ ಈ ಸಿನಿಮಾಕ್ಕೆ ಹೊರಗಿನ ಯಾವುದೇ ವಿತರಕರು ಇಲ್ಲ. ಈ ಸಿನಿಮಾವನ್ನು ಭಾರತ ಹಾಗೂ ವಿದೇಶದಲ್ಲಿ ವೈಯೋಕಾಮ್ 18 ಸ್ಟುಡಿಯೋಸ್‌ನವರೇ ವಿತರಣೆ ಮಾಡಿದ್ದಾರೆ. ಹಾಗಾಗಿ ವಿತರಕರು ಹಣ ವಾಪಸ್ಸಾತಿಗೆ ಒತ್ತಾಯಿಸುತ್ತಿದ್ದಾರೆ ಎಂಬ ಸುದ್ದಿ ಸುಳ್ಳು ಎಂದಿದ್ದಾರೆ.







